ಕಳೆದ 20 ದಿನಗಳಿಂಗ ನೀರು ಪುಲಾಗುತ್ತಿದ್ದರು ಸರಿಪಡಿಸದ ಎಲ್ ಆಂಡ್ ಟಿ ಅಧಿಕಾರಿಗಳು. ಹುಬ್ಬಳ್ಳಿ ಗೋಪಾನಕೊಪ್ಪ ಸ್ವಾಗತ್ ಕಾಲೋನಿಯಲ್ಲಿ ಸತತವಾಗಿ ವ್ಯರ್ಥವಾಗುತ್ತಿರುವ ಕುಡಿಯುವ ನೀರು.
ಒಂದು ಕಡೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಹಲವು ಬಡಾವಣೆಗಳಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಇನ್ನೊಂದು ಕಡೆ ಪೈಪ್‌ಲೈನ್ ಒಡೆದು ಸಾವಿರಾರು ಲೀಟರ್ ಶುದ್ಧ ಕುಡಿಯುವ ನೀರು ರಸ್ತೆ ಪಾಲಾಗುತ್ತಿದೆ. ಹೌದು, ಹುಬ್ಬಳ್ಳಿಯ ಗೋಪಾನಕೊಪ್ಪದ ಸ್ವಾಗತ್ ಕಾಲೋನಿಯಲ್ಲಿ ಕಳೆದ 20 ದಿನಗಳಿಂದ ನಿರಂತರವಾಗಿ ನೀರು ಪೋಲಾಗುತ್ತಿದ್ದರೂ, ನಿರ್ವಹಣೆಯ ಹೊಣೆ ಹೊತ್ತಿರುವ ಎಲ್ ಆಂಡ್ ಟಿ (L&T) ಅಧಿಕಾರಿಗಳು ಮಾತ್ರ ಗಾಢ ನಿದ್ದೆಯಲ್ಲಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.
ಇದು ಹುಬ್ಬಳ್ಳಿಯ ಗೋಪನಕೊಪ್ಪ ವ್ಯಾಪ್ತಿಯ ಸ್ವಾಗತ್ ಕಾಲೋನಿಯ ದೃಶ್ಯ. ಇಲ್ಲಿನ ಮುಖ್ಯ ಪೈಪ್‌ಲೈನ್‌ನಲ್ಲಿ ಕಳೆದ 20 ದಿನಗಳಿಂದ ನಿರಂತರವಾಗಿ ಕುಡಿಯುವ ನೀರು ಸೋರಿಕೆಯಾಗುತ್ತಿದೆ. ಹಗಲು-ರಾತ್ರಿ ಎನ್ನದೆ ಸಾವಿರಾರು ಲೀಟರ್ ಅಮೂಲ್ಯವಾದ ನೀರು ಚರಂಡಿ ಸೇರುತ್ತಿದೆ.
ನಿರಂತರ ನೀರು ಪೂರೈಕೆ ಯೋಜನೆಯ ನಿರ್ವಹಣೆ ಮಾಡುತ್ತಿರುವ ಎಲ್ ಆಂಡ್ ಟಿ (L&T) ಸಂಸ್ಥೆಯ ಅಧಿಕಾರಿಗಳಿಗೆ ಸ್ಥಳೀಯರು ಹಲವು ಬಾರಿ ದೂರು ನೀಡಿದ್ದಾರೆ. ಆದರೂ ಸಹ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯ ಕೈಗೊಂಡಿಲ್ಲ. ನೀರು ಪೋಲಾಗುತ್ತಿರುವುದರಿಂದ ರಸ್ತೆಯೂ ಹಾಳಾಗುತ್ತಿದ್ದು, ಸಾರ್ವಜನಿಕರ ಓಡಾಟಕ್ಕೂ ತೊಂದರೆಯಾಗುತ್ತಿದೆ.
ಅಧಿಕಾರಿಗಳ ಈ ಬೇಜವಾಬ್ದಾರಿತನದ ವಿರುದ್ಧ ಸ್ವಾಗತ್ ಕಾಲೋನಿ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Hubli News Latest Kannada News