ಹುಬ್ಬಳ್ಳಿಯ ಮಿಲ್ಲತ್ ನಗರದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ 45 ವರ್ಷದ ಬಸೀರಾ ಹಸನ್ ಶೇಖ್ ಎಂಬ ಮಹಿಳಾ ಪೆಡ್ಲರ್‌ಳನ್ನು ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಇನ್ಸ್‌ಪೆಕ್ಟರ್ ದಯಾನಂದ ಶೇಗುಣಸಿ ಮತ್ತು ಬೆಂಡಿಗೇರಿ ಠಾಣೆ ಇನ್ಸ್‌ಪೆಕ್ಟರ್ ಎಸ್.ಆರ್. ನಾಯಕ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಬಂಧಿತಳಿಂದ 1 ಲಕ್ಷದ 51 ಸಾವಿರ ರೂಪಾಯಿ ಮೌಲ್ಯದ 1.5 ಕೆ.ಜಿ ಗಾಂಜಾ ಹಾಗೂ ತೂಕದ ಮಷೀನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Hubli News Latest Kannada News