ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಕೋವಿಡ್ ನಿರ್ವಹಣೆ ಮಾಡಲಾಗುತ್ತಿದೆ. ವಿವಿಧ ಖಾಸಗಿ ಸಂಸ್ಥೆಗಳು ಸಹ ಜಿಲ್ಲಾಡಳಿತದ ಜೊತೆ ಕೈ ಜೋಡಿಸಿದ್ದು, ಅಗತ್ಯ ವೈದ್ಯಕೀಯ ಪರಿಕರಗಳನ್ನು ನೀಡುತ್ತಿದ್ದಾರೆ. ತೆಲಂಗಾಣ ರಾಜದ್ಯ ಸಿಕಂದರಾಬ್ ಪೊಲೀಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹುಬ್ಬಳ್ಳಿ ಮೂಲದ ವಿಶ್ವನಾಥ್.ಸಜ್ಜನ ಹಾಗೂ ಅವರ ಗೆಳೆಯ ಬಳಗಿಂದ ಜಿಲ್ಲಾಡಳಿತಕ್ಕೆ 29 ಆಕ್ಸಿಜನ್ ಸಾಂದ್ರಕ, 3400 ಕೋವಿಡ್ ಕಿಟ್, 20 ಸಾವಿರ ಮಾಸ್ಕ್, 220 ಲೀಟರ್ ಸ್ಯಾನಿಟೈಜರ್ ಸೇರಿದಂತೆ ಕೋವಿಡ್ ರೋಗಿಗಳಿಗೆ ನೀಡುವ 60 ಎಂ.ಜಿ.ಯ 239 ಆಫ್ರಿನ್ ಮಾತ್ರೆಗಳು, 9 ಸಾವಿರ ಜಿನವೀಟಾ, 5 ಸಾವಿರ ಮೆಟೋನಿಕ್ಸ್, 5 ಸಾವಿರ ವೈಟಮಿನ್3, 5 ಸಾವಿರ ದಾಸ್‌ಪಾಸ್ ಮಾತ್ರೆಗಳನ್ನು ನೀಡಿದ್ದಾರೆ. ಇದರೊಂದಿಗೆ ನವದುರ್ಗ ಸರ್ಜಿಕಲ್ ಇಂಡಿಯಾ ಪ್ರೇವ್ಹೆಟ್ ಲಿಮಿಟೆಡ್ ನೀಡಿದ ವೈದ್ಯಕೀಯ ಪರಿಕರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ತಹಶೀಲ್ದಾರರಾದ ಶಶಿಧರ ಮಾಡ್ಯಾಳ, ಪ್ರಕಾಶ್ ನಾಸಿ, ಡಾ.ಎಂ.ಸಿ.ಸಜ್ಜನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.