ಹುಬ್ಬಳ್ಳಿ: ಹುಧಾ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಸ್ಥಾನಕ್ಕೆ ಆರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಬೆಳಿಗ್ಗೆ 9.30ರಿಂದ 11.30ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿತ್ತು. ಮಧ್ಯಾಹ್ನ 1ರವರೆಗೆ ಹಿಂಪಡೆಯಲು ಅವಕಾಶವಿದೆ.
ನಾಮಪತ್ರ ಸಲ್ಲಿಕೆ ಮಾಡಿದ ಅಭ್ಯರ್ಥಿಗಳು:
ಬಿಜೆಪಿ: ಈರೇಶ ಅಂಚಟಗೇರಿ (ಮೇಯರ್, ವಾರ್ಡ್ ನಂ. 2), ಉಮಾ ಮುಕುಂದ(ಉಪಮೇಯರ್, ವಾರ್ಡ್ ನಂ. 44).
ಕಾಂಗ್ರೆಸ್:
ಮಯೂರ ಮೋರೆ(ಮೇಯರ್, ವಾರ್ಡ್ ನಂ. 24), ದೀಪಾ ನೀರಕಟ್ಟಿ(ಉಪಮೇಯರ್, ವಾರ್ಡ್ ನಂ. 7)
ಎಐಎಂಐಎಂ:
ನಜೀರ್ ಅಹ್ಮದ್ ಹೊನ್ಯಾಳ(ಮೇಯರ್, ವಾರ್ಡ್ ನಂ. 71), ವಹೀದಾಖಾನಂ ಕಿತ್ತೂರು(ಉಪಮೇಯರ್, ವಾರ್ಡ್ ನಂ. 76).