ಹುಬ್ಬಳ್ಳಿ : ಖಾತೆ ಹಂಚಿಕೆ ವಿಚಾರದಲ್ಲಿ ಸಚಿವರುಗಳಲ್ಲಿ ಸಮಾಧಾನ, ಅಸಮಾಧಾನ ಉಂಟಾಗುವುದು ಸಹಜ ಪ್ರಕ್ರಿಯೆಯಾಗಿದೆ. ಸಚಿವ ಆನಂದ ಸಿಂಗ್ ಅಸಮಾಧಾನ ಬಗ್ಗೆ ನಮ್ಮಗೆ ಹೆಚ್ಚಿನ ಮಾಹಿತಿ ಇಲ್ಲ. ಹಾಗೇನಾದರೂ ಅವರು ಖಾತೆ ಬಗ್ಗೆ ಅಸಮಾಧಾ ಹೊಂದಿದ್ದರೆ ಅದನ್ನು ಮುಖ್ಯಮಂತ್ರಿಗಳು ಸಿರಿ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ ಹೇಳಿದರು.
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ 75 ನೇ ಸ್ವಾತಂತ್ರೋತ್ಸ್ವ ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾತೆ ಅಸಮಾಧಾನದಿಂದ ದೆಹಲಿ, ಬೆಂಗಳೂರಿನಲ್ಲಿ ಆನಂದ ಸಿಂಗ್ ಅವರು ಓಡಾಟುತ್ತಲ್ಲೇ ಇದ್ದಾರೆ. ಅದೂ ನಡಿತ್ತಾನೇ ಇದೆ. ಅದನ್ನು ಮುಖ್ಯಮಂತ್ರಿ ಸೇರಿ ಸಂಪುಟ ಸಚಿವರು ಕೂಡಿಕೊಂಡು ಸರಿ ಮಾಡುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ತಮ್ಮ ಮನೆಗೆ ನೂತನ ಸಚಿವರುಗಳು ಹಾಗೂ ಮಾಜಿ ಸಚಿವರ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಾನು ಮಾಜಿ ಸಿಎಂ ಆಗಿದ್ದೇನೆ, ಪಕ್ಷದ ಹಿರಿಯ ನಾಯಕರ ಸ್ಥಾನದಲ್ಲಿ ಇರುವುದರಿಂದ ಸಹಜವಾಗಿ ಭೇಟಿ ಆಗಲು ಬರುತ್ತಾರೆ. ಬಂದವರಿಗೆ ರಾಜಕೀಯ ಮಾರ್ಗದರ್ಶನ ಇಲಾಖೆ ಮುನ್ನಡೆಸಯವ ಸಲಹೆಗಳನ್ನು ನೀಡುತ್ತೇವೆ. ಅದಕ್ಕೆ ಏನೂ ವಿಶೇಷ ಅರ್ಥ ಕಲ್ಪಿಸುವುದು ಬೇಡಾ. ಅಲ್ಲದೆ ಖಾತೆ ಅಸಮಾಧಾನ, ಖಾತೆ ಬದಲಾವಣೆ, ಬ್ರಷ್ಟಾಚಾರ ಆರೋಪಿಸುತ್ತಿರುವ ಸಚಿವೆ ಶಶಿಕಲಾ ಜೊಲ್ಲೆಯವರ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಸೇರಿದಂತೆ ಎಲ್ಲ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೆವೆ ಎಂದರು.
ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಈಗಾಗಲೇ ಹಲವು ಕಂಪನಿಗಳು ಕಾರ್ಯರಂಭ ಮಾಡುತ್ತಿವೆ. ಅವಳಿನಗರದಲ್ಲಿ 25 ಸಾವಿರ ಕೋಟಿ ಇನ್ವೇಷ್ಟಮೆಂಟ್ ಬಂದಿದೆ. ಮುಮ್ಮಿಗಟ್ಟಿ ಕೈಗಾರಿ ಪ್ರದೇಶದಲ್ಲಿ ಯು ಪ್ಲೇಕ್ಸ್ ಕಂಪನಿ ಕಾರ್ಯವನ್ನು ಆರಂಭಿಸಿದೆ. ರಾಜೇಶ ಎಲೆಕ್ಟ್ರಿಕ್ ವಾಹನ ತಯಾರಿಕೆ ಕಂಪನಿಗೆ 150 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಸದ್ಯದಲ್ಲಿಯೇ ಕಂಜೂಮರ್ ಎಲೆಕ್ಟ್ರಿಕ್ ಗೂಡ್ಸದ ಕ್ಲಸ್ಟರ್ ಪ್ರಾರಂಭವಾಗುತ್ತಿದೆ. ಇದೊಂದು ನಿರುದ್ಯೋಗ ಯುವಕರಿಗೆ ಹಾಗೂ ಈ ಭಾಗದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಅಲ್ಲದೆ ಅವಳಿ ನಗರದಲ್ಲಿ ಸ್ಥಗಿತವಾಗಿರುವ ರಸ್ತೆ ಕಾಮಗಾರಿಗಲಕ ಕುರಿತು ಈಗಾಗಲೇ ನೂತನ ಲೋಕಪಯೋಗಿ ಸಚಿವ ಸಿಸಿ ಪಾಟೀಲ್ ಅವರೊಂದಿಗೆ ಮಾತಾಡಿದ್ದೇನೆ ಎಂದು ತಿಳಿಸಿದರು.