ಹುಬ್ಬಳ್ಳಿ: ತಾಲೂಕಿನ ಕೊಟಗೊಂಡಹುಣಸಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಧ್ವಜಾರೋಹಣವನ್ನು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಶಂಕರಗೌಡ ಹೊನ್ನಪ್ಪಗೌಡ್ರ ನೆರವೇರಿಸಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಪದ್ಮಾವತಿ ಪಾಟೀಲ, ಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ಎಮ್.ಹಗೇದ, ಶಿಕ್ಷಕರುಗಳಾದ ಜೆ.ಎನ್.ಕಳ್ಳಿಮನಿ, ಎಂ.ಎಸ್.ಪಟವರ್ಧನ, ಎಸ್.ಎಸ್.ಮಿಕಲಿ, ಬಿ.ಎಸ್.ಹಾವೇರಿ, ವ್ಹಿ.ಕೆ.ದಾಸರ, ಬಿ.ಎಸ್.ಬಸರಕೋಡ, ಗಿರಿಜಾ ನಾಯ್ಕ, ವಿದ್ಯಾ ಹಲಕುರ್ಕಿ, ಗ್ರಾಮ ಪಂಚಾಯತ ಸದಸ್ಯರಾದ ಹೊನ್ನಪ್ಪ ಸೋಲಾರಗೊಪ್ಪ, ಮುಕ್ತುಂಹುಸೇನ ಬಡಿಗೇರ, ಯುವಕರಾದ ಅಶೋಕ ಸೋಲಾರಗೊಪ್ಪ, ಪ್ರಭು ರಂಗಣ್ಣನವರ, ಗಜಾನನ ಹರಿಜನ, ಸಿದ್ದಲಿಂಗ ಎಲಿವಾಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
