Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಪೈಪ್ ಅಂಗಡಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಪೈಪ್ ಅಂಗಡಿ

Spread the love

ಹುಬ್ಬಳ್ಳಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಪೈಪ್ ಅಂಗಡಿಯೊಂದಕ್ಕೆ ಬೆಂಕಿ ತಗುಲಿ ಹೊತ್ತಿ ಉರಿದಿರುವ ಘಟನೆ ಇಲ್ಲಿನ ಕಾಟನ್ ಮಾರ್ಕೆಟ್ ನ ಜಯಪ್ರಕಾಶ್ ಹೊಟೆಲ್ ಎದುರಿನ ಶ್ರೀಧರ ಹೋಲಸೇಲ್ ಪೈಪ್ ನಲ್ಲಿ ನಡೆದಿದೆ.

ಉದಯ ಕೋರೆ ಎಂಬುವವರಿಗೆ ಸೇರಿರುವ ಅಂಗಡಿಯಾಗಿದ್ದು, ನಸುಕಿನಜಾವ ಸುಮಾರು 3.30 ರ ವೇಳೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ. ಶಾಟ್ ಸರ್ಕ್ಯೂಟ್ ನಿಂದಾಗಿ ಅರ್ಧಾ ಅಂಗಡಿ ಬೆಂಕಿಗೆ ಆಹುತಿಯಾಗಿವೆ. ಅಂಗಡಿಗಳಲ್ಲಿದ್ದ ಲಕ್ಷಾಂತರ ರೂಪಾಯಿ ವಸ್ತುಗಳು ಸುಟ್ಟು ಕರಕಲಾಗಿವೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Santosh Naregal

Check Also

ಹುಬ್ಬಳ್ಳಿಯಲ್ಲಿ ಚೈನೀಸ್ ವೋಕ್ ಆರಂಭ

Spread the loveಹುಬ್ಬಳ್ಳಿ : ಲೆನೆಕ್ಸಿಸ್ ಫುಡ್‌ವರ್ಕ್ಸ್‌ನ ಭಾರತದ ಪ್ರಮುಖ ದೇಸಿ ಚೈನೀಸ್ ತ್ವರಿತ ಸೇವೆಗಳ ರೆಸ್ಟೊರೆಂಟ್‌ (ಕ್ಯುಎಸ್‌ಆರ್‌) ಬ್ರ್ಯಾಂಡ್‌ಗಳಲ್ಲಿ …

Leave a Reply

Your email address will not be published. Required fields are marked *

[the_ad id="389"]