ಹುಬ್ಬಳ್ಳಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಪೈಪ್ ಅಂಗಡಿಯೊಂದಕ್ಕೆ ಬೆಂಕಿ ತಗುಲಿ ಹೊತ್ತಿ ಉರಿದಿರುವ ಘಟನೆ ಇಲ್ಲಿನ ಕಾಟನ್ ಮಾರ್ಕೆಟ್ ನ ಜಯಪ್ರಕಾಶ್ ಹೊಟೆಲ್ ಎದುರಿನ ಶ್ರೀಧರ ಹೋಲಸೇಲ್ ಪೈಪ್ ನಲ್ಲಿ ನಡೆದಿದೆ.
ಉದಯ ಕೋರೆ ಎಂಬುವವರಿಗೆ ಸೇರಿರುವ ಅಂಗಡಿಯಾಗಿದ್ದು, ನಸುಕಿನಜಾವ ಸುಮಾರು 3.30 ರ ವೇಳೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ. ಶಾಟ್ ಸರ್ಕ್ಯೂಟ್ ನಿಂದಾಗಿ ಅರ್ಧಾ ಅಂಗಡಿ ಬೆಂಕಿಗೆ ಆಹುತಿಯಾಗಿವೆ. ಅಂಗಡಿಗಳಲ್ಲಿದ್ದ ಲಕ್ಷಾಂತರ ರೂಪಾಯಿ ವಸ್ತುಗಳು ಸುಟ್ಟು ಕರಕಲಾಗಿವೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.