ಹುಬ್ಬಳ್ಳಿ ಪಂಚಮಸಾಲಿ ಜಗದ್ಗುರು ಜಯಮೃತ್ಯುಂಜಯ ಸ್ವಾಮಿಗಳಿಗೆ ಆದರದ ಸ್ವಾಗತ ಶ್ರಾವಣ ಮಾಸದ ಕಾರ್ಯಕ್ರಮದಂಗವಾಗಿ ಕೂಡಲಸಂಗಮದಲ್ಲಿ ಪೂಜಾನುಷ್ಠಾನ ಕೈಗೊಳ್ಳಲು ಇಂದು ಬೆಳಿಗ್ಗೆ 8:00 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜಾಗತಿಕ ಲಿಂಗಾಯತ ಪಂಚಮಸಾಲಿ ಸಮಾಜದ ಪೀಠಾಧಿಪತಿಗಳೂ ತಪೋನಿಷ್ಠರು ಆದ ಜಗದ್ಗುರು ಶ್ರೀ ಜಯಮೃತ್ಯುಂಜಯ ಮಹಾಸ್ವಾಮಿಗಳು ಅವರನ್ನು ಸಮಾಜ ಬಾಂಧವರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಮುಖಂಡರಾದ ಗಂಗಾಧರ ದೊಡ್ಡವಾಡ ಶಂಕರ್ ಮಲಕಣ್ಣವರ್ ರಾಜು ಕೊಟಗಿ ಶಿವಾನಂದ ಮಾಯಕಾರ ಕಲ್ಲಪ್ಪ ಶಿಸನಳ್ಳಿ ಬಸವರಾಜಗೋಕುಲಮಠ ಸಿದ್ದು ಶಿಸವಳ್ಳಿ ಮುಂತಾದ ವರು ಉಪಸ್ಥಿತರಿದ್ದರು.
