ಹುಬ್ಬಳ್ಳಿ: ನಗರದ ಗದಗ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದವರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ₹1 ಲಕ್ಷ ಮೌಲ್ಯದ ಮದ್ಯ ಹಾಗೂ ₹50 ಸಾವಿರ ಮೌಲ್ಯದ ಓಮಿನಿ ವಾಹನ ಸೇರಿದಂತೆ ಒಟ್ಟು ₹1.50 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಿದ್ದಾರೆ.
ಬಂಧಿತರಲ್ಲಿ ಪ್ರವೀಣ್, ಬಾಲಕೃಷ್ಣ ಮಿಸ್ಕಿನ್ (42), ಗಣೇಶಗುಡಿ ಎದುರು, ಅರವಿಂದನಗರ, ಹಳೇ ಹುಬ್ಬಳ್ಳಿ ನಿವಾಸಿ ಎಂಬ ಮಾಹಿತಿ ಲಭ್ಯವಾಗಿದೆ. ಮತ್ತೊಬ್ಬ ಆರೋಪಿಯ ಹೆಸರು ರಾಮಕೃಷ್ಣ ಅವಟೆ ಎಂದು ತಿಳಿದುಬಂದಿದೆ.
ಸಿಸಿಬಿ ಸಿಬ್ಬಂದಿಗಳಾದ ದಾನೇಶ್ ಮಾಂಗ ಸುನೀಲ್ ಪಾಂಡೆ, ಎಂ.ಬಿ. ಧನಿಗೊಂಡ, ಎಂ.ಬಿ. ಪಾಟೀಲ್, ಹಾಗೂ ಎಂ.ಬಿ. ಭಜಂತ್ರಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಪಿಎಸ್ಐ ಬಾಬಾ, ರೂಪಸಿಂಗ್ ರಾಠೋಡ್ ಹಾಗೂ ಮಚ್ಚದ್ ಉಪಸ್ಥಿತರಿದ್ದರು. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಆಯುಕ್ತ ಬೊರಸೆ ಭೂಷಣ್ ಗುಲಾಬರಾವ್ ಅವರು ಸಿಸಿಬಿ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Hubli News Latest Kannada News