Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ (page 33)

ಹುಬ್ಬಳ್ಳಿ , ಧಾರವಾಡ

ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಗುಲಾಬಿ, ಚಾಕಲೇಟ್ , ಪುಸ್ತಕ ನೀಡಿ ಸ್ವಾಗತಿಸಿ ಶಿಕ್ಷಕರು

Spread the loveಹುಬ್ಬಳ್ಳಿ : ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಪರಂಭವಾಗಿದ್ದು ಹರ್ಷದಿಂದ ಆಗಮಿಸಿದ ಶಾಲಾ ಮಕ್ಕಳಿಂದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಹೌದು ಹುಬ್ಬಳ್ಳಿ ಲ್ಯಾಮಿಂಗ್ಟನ್ ಶಾಲೆಗೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವ ಮಕ್ಕಳು ಮೊದಲ ದಿನವೇ ಕ್ಲಾಸ್ ಫುಲ ಆಗಿವೆ . ಹುಬ್ಬಳ್ಳಿ ಲ್ಯಾಮಿಂಗ್ಟನ್ ಶಾಲೆಯಲ್ಲಿ ಇಂದು ಮೊದಲೇ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಮಕ್ಕಳಿಗೆ ಶಿಕ್ಷಕರು ಗುಲಾಬಿ ಚಾಕಲೇಟ್ ,ಪುಸ್ತಕ ನೀಡಿ ಸ್ವಾಗತಿಸಿದ ದೃಶ್ಯಗಳು ಕಂಡು ಬಂದವು.

Read More »

ಔಷಧಿ ತರಲು ಹೋಗಿ ಕಾಣೆಯಾದ ವೃದ್ದ

Spread the loveಕಲಘಟಗಿ: ಔಷಧಿ ತರಲು ಹೋಗಿ ಬರುತ್ತೇನೆಂದು ಮನೆಯಿಂದ ಹೊರಕ್ಕೆ ಹೋಗಿದ್ದ ವ್ಯಕ್ತಿಯೋರ್ವ ಕಾಣೆಯಾಗಿರುವ ಕುರಿತು ಇಲ್ಲಿನ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚನ್ನಬಸಪ್ಪ ಕಡ್ಲಿ (65) ಕಾಣೆಯಾದವನಾಗಿದ್ದು, ಕಲಘಟಗಿ ತಾಲೂಕಿನ ನೆಲ್ಲಿ ಹರವಿ ಗ್ರಾಮದ ನಿವಾಸಿಯಾಗಿದ್ದಾನೆ. ಈತ ಮಾನಸಿಕ ಅಸ್ವಸ್ಥರಾಗಿದ್ದು, ಪ್ರತಿದಿನ ಔಷಧಿ ತೆಗೆದುಕೊಳ್ಳುತ್ತಿದ್ದರು. ಆದರೆ ಅವು ಮುಗಿದ ಹೋದ ಹಿನ್ನೆಲೆಯಲ್ಲಿ ಔಷಧಿ ತರುವುದಾಗಿ ಮೇ.11 ರಂದು ಮನೆಯಿಂದ ಹೊರಹೊಗಿದ್ದು ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದಾರೆ. …

Read More »

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

Spread the loveಹುಬ್ಬಳ್ಳಿ : ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಶಂಭುಲಿಂಗ ಕಮಡೊಳ್ಳಿ(35) ಕೊಲೆಯಾದ ಯುವಕ. ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿ‌ಯಾಗಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಕಳೆದ ಒಂದು ವರ್ಷದ ಹಿಂದೆ ಅಷ್ಟೇ ಶಂಭುಲಿಂಗ ಕಮಡೊಳ್ಳಿ ಮದುವೆಯಾಗಿದ್ದ. ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಹುಬ್ಬಳ್ಳಿ ಕುಸುಗಲ್ ರಸ್ತೆಯಲ್ಲಿ ಕ್ರಿಕೆಟ್ ಬೆಟ್ಟಿಂಗ ಆಡುತ್ತಿದ್ದ ಓರ್ವನ ಬಂಧನ

Spread the loveಹುಬ್ಬಳ್ಳಿ : IPL ಕ್ರಿಕೆಟ್ ಬೆಟ್ಟಿಗ ಆಡುತ್ತಿದ ಓರ್ವ ಆರೋಪಿಯನ್ನು ಕೇಶ್ವಾಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ ಕುಸುಗಲ್ ಮುಖ್ಯ ರಸ್ತೆಯಲ್ಲಿ ಆಡುತ್ತಿದ ವೇಳೆ ಆರೋಪಿಯನ್ನು ಬಂಧಿಸಿ ಆತನಿಂದ 5000 ರೂ ನಗದು ಹಾಗೂ 01 ಮೊಬೈಲ್ ವಶಪಡಿಸಿಕೊಂಡಿದ್ದು. ಆರೋಪಿಯ ವಿದುದ್ದ ಕೇಶ್ವಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾನೂನು ಕ್ರಮ ಕೈಗೊಳ್ಳಲಾಗಿದೆ.

Read More »
[the_ad id="389"]