Home / Top News / ಆಕಸ್ಮಿಕ ಬೆಂಕಿಗೆ 4 ಬಣವೆಗಳು ಭಸ್ಮ : ಸಂಕಷ್ಟಕ್ಕೆ ಸಿಲುಕಿದ ರೈತರು

ಆಕಸ್ಮಿಕ ಬೆಂಕಿಗೆ 4 ಬಣವೆಗಳು ಭಸ್ಮ : ಸಂಕಷ್ಟಕ್ಕೆ ಸಿಲುಕಿದ ರೈತರು

Spread the love

ಹುಬ್ಬಳ್ಳಿ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ, ನಾಲ್ಕು ಹೊಟ್ಟಿನ ಬಣವೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.

ಗ್ರಾಮದ ರೈತರಾದ ಶೀತಲ್ ನಾಗರಹಳ್ಳಿ, ಶಿವಾನಂದ, ತಂಗ್ಯಮ್ಮನವರ ಹಾಗೂ ಯಲ್ಲಪ್ಪ ಕಲಿವಾಳ ಅವರಿಗೆ ಸೇರಿದ ಬಣವೆಗಳಿಗೆ ಏಕಾಏಕಿ ಬೆಂಕಿ ತಗುಲಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ ಪರಿಣಾಮ ಬಣವೆಗಳಲ್ಲಿದ್ದ ಮೇವು ಹಾಗೂ ದವಸ ಧಾನ್ಯಗಳು ಭಸ್ಮವಾಗಿದ್ದು.

​ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಮಾಡಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

About Editor 2

Check Also

ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ

Spread the loveಬೆಂಗಳೂರು-ಮೈಸೂರು ರಸ್ತೆಯ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ಬಳಿ ಲಾರಿ ಮತ್ತು ಸ್ಕೂಟಿ ನಡುವೆ ಭೀಕರ ಅಪಘಾತ …

Leave a Reply

Your email address will not be published. Required fields are marked *

[the_ad id="389"]