Home / Top News / ಕಿಡ್ನ್ಯಾಪ್ ಆದ್ ವ್ಯಕ್ತಿಯನ್ನು ಕೇವಲ 2 ಗಂಟೆಯಲ್ಲಿ ರಕ್ಷಿದ ಗೋಕುಲ್ ರೋಡ್ ಠಾಣೆ ಪೊಲೀಸರು

ಕಿಡ್ನ್ಯಾಪ್ ಆದ್ ವ್ಯಕ್ತಿಯನ್ನು ಕೇವಲ 2 ಗಂಟೆಯಲ್ಲಿ ರಕ್ಷಿದ ಗೋಕುಲ್ ರೋಡ್ ಠಾಣೆ ಪೊಲೀಸರು

Spread the love

ಹುಬ್ಬಳ್ಳಿಯಲ್ಲಿ ಅಪಹರಣಕ್ಕೊಳಗಾಗಿದ್ದ ವ್ಯಕ್ತಿಯನ್ನು ಕೇವಲ ಎರಡೇ ಗಂಟೆಗಳಲ್ಲಿ ರಕ್ಷಿಸುವಲ್ಲಿ ಗೋಕುಲ್ ರೋಡ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿಯ ಗೋಕುಲ ರಸ್ತೆಯ ಸೆಂಟ್ರಲ್ ಎಕ್ಸೈಜ್ ಕಾಲೋನಿಯ ನಿವಾಸಿ ಸುರೇಶ ಪೂಜಾರಿ ಎಂಬ 32 ವರ್ಷದ ವ್ಯಕ್ತಿಯನ್ನು ನಿನ್ನೆ ರಾತ್ರಿ ಅಂದರೆ ನವೆಂಬರ್ 11ರಂದು ರಾತ್ರಿ 9:45ರ ಸುಮಾರಿಗೆ ಅಪಹರಿಸಲಾಗಿತ್ತು.

​ಈ ಕುರಿತು ಮಾಹಿತಿ ಲಭಿಸುತ್ತಿದ್ದಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಗೋಕುಲ್ ರೋಡ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂಗಮೇಶ ದಿದಿಗನಾಳ್ ನೇತೃತ್ವದ ತಂಡ, ಮಿಂಚಿನ ಕಾರ್ಯಾಚರಣೆ ನಡೆಸಿ ಕೇವಲ 2 ಗಂಟೆಗಳ ಒಳಗಾಗಿ ಅಪಹರಣಕ್ಕೊಳಗಾಗಿದ್ದ ಸುರೇಶ ಪೂಜಾರಿ ಅವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

​ಕಾರ್ಯಾಚರಣೆಯಲ್ಲಿ ಬೆಳಗಾವಿ ಮೂಲದ ಶಿವಕುಮಾರ ಚಂದ್ರಶೇಖರ ಹಿರೇಮಠ ಹಾಗೂ ಬೈಲಹೊಂಗಲ ತಾಲೂಕಿನ ಗಿರಿಯಾಲ ಗ್ರಾಮದ ಮಂಜುನಾಥ ಅಡಿವೆಪ್ಪ ಕರಡಿ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಇನ್ನು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ರಕ್ಷಿಸಿದ ಇನ್ಸ್‌ಪೆಕ್ಟರ್ ಸಂಗಮೇಶ ದಿದಿಗನಾಳ್ ಹಾಗೂ ಸಿಬ್ಬಂದಿಗಳಾದ ಬಸವರಾಜ ಬೆಳಗಾವಿ, ವಸಂತ ಗುಡಿಗೇರಿ, ಸುನೀಲ್ ಲಮಾಣಿ, ಚಂದ್ರು ಹಿರೇಮಠ, ರುದ್ರಪ್ಪ ಹೊರಟ್ಟಿ, ಧರೇಶ ಬೆಂಡಿಗೇರಿ ಮತ್ತು ಮಲ್ಲರೆಡ್ಡಿ ಬೆನ್ನೂರು ಅವರ ಕಾರ್ಯಕ್ಕೆ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About Editor 2

Check Also

ಹುಬ್ಬಳ್ಳಿ ದಯಾನಂದ ಕಾಲೋನಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್’ಗಳು ಸುಟ್ಟು ಕರಕಲು

Spread the loveಹುಬ್ಬಳ್ಳಿಯಲ್ಲಿ ಆಕಸ್ಮಿಕ ಬೆಂಕಿ ಅವಘಡವೊಂದು ಸಂಭವಿಸಿದ್ದು, ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳು ಬೆಂಕಿಗಾಹುತಿಯಾಗಿವೆ. ಹುಬ್ಬಳ್ಳಿಯ ದಯಾನಂದ ಕಾಲೋನಿಯಲ್ಲಿ …

Leave a Reply

Your email address will not be published. Required fields are marked *

[the_ad id="389"]