ಬಸವ ಜಯಂತಿ ಹಾಗೂ ರಂಜಾನ್ ಹಬ್ಬವನ್ನು ಪ್ರತಿ ವರ್ಷದಂತೆ ಈ ವರ್ಷವೂ ಆಚರಿಸಲಾಯಿತು. ಆದರೆ ಇದೊಂದು ಗ್ರಾಮದಲ್ಲಿ ಮುಸ್ಲಿಂ ಜನಾಂಗದವರು ರಂಜಾನ್ ಪ್ರಾರ್ಥನೆ ಸಲ್ಲಿಸಿ, ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಜನ ಸಾಗರ ಹರಿದು ಬಂದು ಬಸವೇಶ್ವರ ದೇವಸ್ಥಾನ ದಲ್ಲಿ ಪೂಜಾ ಪುನಸ್ಕಾರ ಮಾಡಿ ನಾವೆಲ್ಲರೂ ಒಂದೇ ಎಂಬ ಭಾವ್ಯಕತ್ಯೆ ಸಾರಿದು ನಿಜಕ್ಕೂ ನೋಡುಗರನ್ನು ಸಂತೋಷ ಪಡಿಸಿತ್ತು.
ಹೌದು,,! ಅರೆ ‘ ಅದ್ಯಾವುದೋ ಗ್ರಾಮ ಅಂತೀರಾ? ಧಾರವಾಡ ಜಿಲ್ಲಾ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ. ಇಲ್ಲಿನ ಜನ ಪ್ರತಿ ವರ್ಷ ಹಿಂದೂ- ಮುಸ್ಲಿಂ ಭಾವ್ಯಕತ್ಯೆ ಸಾರುವ ಮೊಹರಂ ಹಬ್ಬವನ್ನು ಅತಿ ವಿಜೃಂಭಣೆಯಿಂದ ಆಚರಿಸುತ್ತಾರೆ.
ಅದರಂತೆ ಇವತ್ತು ಮುಸ್ಲಿಂ ಜನಾಂಗದವರು ರಂಜಾನ್ ಹಬ್ಬದಂದು ಈ ನಾಡಿಗೆ ಸಮಗ್ರ ಶಾಂತಿ, ನೆಮ್ಮದಿ ಕರುಣೆಸಿಲಿ ಎಂದು ಪ್ರಾರ್ಥನೆ ಸಲ್ಲಿಸಿ. ಬಸವೇಶ್ವರ ದೇವಸ್ಥಾನ ಬಂದು ತಂಪು ಪಾನೀಯನ್ನು ಸ್ವೀಕರಿಸಿ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಬೆಳಸಿಕೊಂಡು ಬಂದವರು.
ಇದು ನಮ್ಮ ಸಂದೇಶ ಇಡಿ ಕರ್ನಾಟಕದಾದ್ಯಂತ ಪಸರಸಿಲಿ ಎಂದು ನಮ್ಮ ಅಬಿಲಾಷಿಯಾಗಿದೆ ಎಂದರು ಗ್ರಾಮದ ಹಿಂದೂ ಮುಸ್ಲಿಂ ಜನಾಂಗದವರು.
ಒಟ್ಟಿನಲ್ಲಿ ಈ ಭಾವ್ಯಕತ್ಯೆ ನೋಡಿದ ಜನರಲ್ಲಿ ನಗುವಿನ ವಾತಾವರಣ ಸೃಷ್ಟಿಯಾಗಿತ್ತು. ಮತ್ತು ನೋಡುಗರನ್ನ ಮನ ಸೆಳೆಯತ್ತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಡಿವೆಪ್ಪ ಶಿವಳ್ಳಿ ಬಿಜೆಪಿ ಯುವ ಮುಖಂಡ ಲಾಲಸಾಬ್ ನದಾಫ್ ಎಮ್ ಎಲ್ ನದಾಫ ಚೆನ್ನಪ್ಪ ಹಳ್ಳಿಕೇರಿ ನೂರ್ ಅಹ್ಮದ್ ಎಲಿಗಾರ್ ಮೋದಿನಸಾಬ್ ಎಲಿಗಾರ್ ರಮೇಶ್ ನಾಯಕರ್ ಹಾಗೂ ಗ್ರಾಮದ ಹಿಂದೂ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು