ಧಾರವಾಡ ಜಿಲ್ಲೆಯಲ್ಲಿ ಕರೋನಾ ಪಾಸಿಟಿವಿಟಿ ಕಡಿಮೆ ಇದ್ದರೂ ಕೂಡ ಮತ್ತೆ ಲಾಕ್ ಡೌನ್ ಪಟ್ಟಿಗೆ ಸೇರಿಸಿದ್ದ ಧಾರವಾಡ ಜಿಲ್ಲೆಯನ್ನು ನಾಳೆಯಿಂದ ಅನ್ ಲಾಕ್ ಮಾಡಲಾಗಿದೆ . ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರ ಮಾತುಕತೆಯಿಂದಾಗಿ ರಾಜ್ಯ ಸರ್ಕಾರದ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಜಿಲ್ಲೆಗೆ ಅನ್ ಲಾಕ್ ನೀಡಿದ್ದಾರೆ.
ಹೀಗಾಗಿ ಜಿಲ್ಲೆಯಲ್ಲಿ ನಾಳೆ ಎಲ್ಲವೂ ಆರಂಭವಾಗಲಿದ್ದು ಬೆಳಿಗ್ಗೆ 6ಗಂಟೆಯಿಂದ 5ಗಂಟೆಯವರೆಗೆ ಎಲ್ಲವೂ ಲಭ್ಯವಾಗಲಿದೆ ಜಿಲ್ಲೆಯಲ್ಲಿ ಪಾಸಿಟಿವಿಟಿ ಕಡಿಮೆ ಇದ್ದರೂ ಕೂಡ ಜಿಲ್ಲೆಗೆ ಲಾಕ್ ಡೌನ್ ಮಾಡಿ ಹಳೆಯ ಆದೇಶವನ್ನು ಮುಂದುವರಿಸಲಾಗಿತ್ತು ಈ ಕುರಿತು ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿತ್ತು ಇದರೊಂದಿಗೆ ಸಚಿವ ಜಗದೀಶ್ ಶೆಟ್ಟರ್ ಕೂಡ ಮಾತನಾಡಿ ಕೊನೆಗೂ ಜಿಲ್ಲೆಯಲ್ಲಿ ಅನ್ ಲಾಕ್ ಮಾಡಿಸಿ ಹೊಸ ಆದೇಶ ಹೊರಡಿಸಿದ್ದಾರೆ ಇದರಿಂದಾಗಿ ನಾಳೆಯಿಂದ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಸಂಜೆ 5ಗಂಟೆವರೆಗೆ ಎಲ್ಲವೂ ಆರಂಭವಾಗಲಿದ್ದು ಜುಲೈ ೫ ವರೆಗೆ ಈ ಒಂದು ಆದೇಶ ಅನ್ವಯವಾಗಲಿದೆ .
Hubli News Latest Kannada News