ಹುಬ್ಬಳ್ಳಿ: ಧಾರವಾಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಅಳ್ನಾವರ ತಾಲೂಕಿನ ಕಂಬಾರಗಣವಿ ಸೇತುವೆ ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ಥಗೊಂಡಿದೆ.
ಕಳೆದ ಐದಾರು ದಿನಗಳಿಂದ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದ್ದು, ಹೊಲ, ಗದ್ದೆಗಳಿಂದ ನೀರು ಹೊರಬರುತ್ತಿದೆ. ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಅದೇ ರೀತಿ ವಿಪರೀತ ಮಳೆಯಿಂದಾಗಿ 10 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಕಂಬಾರಗಣವಿ ಸೇತುವೆ ಜಲಾವೃತಗೊಂಡಿದ್ದು, ಸಂಚಾರ ಅಸ್ತವ್ಯಸ್ಥಗೊಂಡಿದೆ.
ಈ ಸೇತುವೆ ಜಲಾವೃತವಾದರೆ ಆಕಡೆ ಜನ ಆಕಡೆ, ಈ ಕಡೆ ಜನ ಈ ಕಡೆ ನಿಲ್ಲುವ ಪರಿಸ್ಥಿತಿದೆ. ಇದೆ. ಹಲವಾರು ವರ್ಷಗಳಿಂದ ಈ ಸೇತುವೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬ ಒತ್ತಾಯ ಇದ್ದರೂ ಆ ಕಾರ್ಯ ಮಾತ್ರ ಇನ್ನೂ ಕೈಗೂಡಿಲ್ಲ.
ನೀರಿನ ರಭಸಕ್ಕೆ ಮರದ ಕೊಂಬೆಗಳು ಸಹ ತೇಲಿ ಬಂದು ಬ್ರಿಜ್ ಮೇಲೆ ನಿಂತಿವೆ. ಇದರಿಂದ ನೀರಿನ ಹರಿವು ಕಡಿಮೆಯಾಗುವವರೆಗೂ ಜನ ನಿಂತ ಜಾಗದಲ್ಲೇ ನಿಲ್ಲುವ ಪರಿಸ್ಥಿತಿ ಎದುರಾಗಿದೆ.