ಹುಬ್ಬಳ್ಳಿ : ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರಿ ಅನಾಹುತವೊಂದು ತಪ್ಪಿದೆ.
ಲ್ಯಾಂಡಿಂಗ್ ವೇಳೆ ವಿಮಾನದ ಟೈರ್ ಬ್ಲಾಸ್ಟ್ ಆಗಿ
ಕ್ಷಣ ಮಾತ್ರದಲ್ಲಿ ಸಂಭವಿಸಬಹುದಾಗಿದ್ದ ಬಹು ದೊಡ್ಡ ಅನಾಹುತ ತಪ್ಪಿದೆ.
ನಿನ್ನೆ ಸಂಜೆ ಕನ್ನೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ
ಇಂಡಿಗೋ 6e 7979 ವಿಮಾನದ ಟೈರ್ ಬ್ಲಾಸ್ಟ್ ಆಗಿದೆ. ಫೈಲಟ್ ಸಮಯ ಪ್ರಜ್ಞೆಯಿಂದ ಬಹುದ ದೊಡ್ಡ ಅನಾಹುತ ತಪ್ಪಿದೆ.
ಕಣ್ಣೂರುನಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನವೂ ಹುಬ್ಬಳ್ಳಿಯಿಂದ 18 ಪ್ಯಾಸೆಂಜರ್ ಗಳನ್ನ ಕರೆದುಕೊಂಡು ಪ್ರಯಾಣ ಬೆಳೆಸಬೇಕಿತ್ತು. ಆದರೆ, ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ವೇಳೆಯಲ್ಲಿ ಸುಮಾರು 200 ಮೀಟರ್ ಮುಂದೆ ಬಂದು ಲ್ಯಾಂಡ್ ಆಗಿದೆ, ಈ ಸಮಯದಲ್ಲಿ ನೋಸ್ ಟೈರ್ ಶೂಟ್ ಆಪ್ ಆಗಿದೆ.
ಘಟನೆಯಿಂದ ಗಾಬರಿಯಾಗದಂತೆ ಲ್ಯಾಂಡಿಂಗ್ ಆಗುತ್ತಿದ್ದ ವಿಮಾನವನ್ನ ಮತ್ತೆ ಟೇಕ್ ಆಪ್ ಮಾಡಿದ, ಪೈಲಟ್, ಸಾವಕಾಶವಾಗಿ ವಿಮಾನವನ್ನ ಮತ್ತೆ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ನೋಸ್ ಟೈರ್ ಸ್ಪೋಟಗೊಂಡಿದ್ದರಿಂದ ಮುಂದಿನ ಪ್ರಯಾಣವನ್ನ ರದ್ದುಗೊಳಿಸಲಾಗಿದೆ.
ಇದರಿಂದ ಹುಬ್ಬಳ್ಳಿಯಿಂದ ಹೋಗುತ್ತಿದ್ದ 18 ಪ್ರಯಾಣಿಕರು ತಮ್ಮ ಪ್ರಯಾಣವನ್ನ ರದ್ದುಗೊಳಿಸಿ, ಮರಳಿ ಹೋದ ಘಟನೆಯೂ ನಡೆದಿದ್ದು, ಘಟನೆಗೆ ಸಂಬಂದಿಸಿದಂತೆ ಡಿಸಿಜಿ ತಂಡವೂ ತನಿಖೆ ಮಾಡುವ ಸಾಧ್ಯತೆಯಿದೆ.