ಹುಬ್ಬಳ್ಳಿ : ಕೋವಿಡ್ ಸೋಂಕಿನಿಂದ ಗುಣಮುಖರಾದವರಲ್ಲಿ ಕಾಣಿಸುವ ಬ್ಲ್ಯಾಕ್ ಫಂಗಸ್ 12 ಜನರಲ್ಲಿ ಕಂಡುಬಂದಿದ್ದು, ಇಲ್ಲಿನ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾಲ್ವರು ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.
ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅತ್ಯವಶ್ಯಕ ಔಷಧ ಕೊರತೆ ಇದೆ ಎಂದು ಕಿಮ್ಸ್ ನ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದರು.