ಹುಬ್ಬಳ್ಳಿ : ನಾಯಕತ್ವ ಬದಲಾವಣೆ ಪದೇ ಪದೇ ಯಾಕೆ ಚರ್ಚೆ ಆಗ್ತಿದೆ ಅಂತ ಗೊತ್ತಾಗುತ್ತಿಲ್ಲ. ಇದರಿಂದ ಸರ್ಕಾರದ ಇಮೇಜ್ ಗೂ ಡ್ಯಾಮೇಜ್ ಆಗುತ್ತಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಅಸಮಾಧಾನ ಹೊರಹಾಕಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ವಿಷಯದಿಂದ ನಮಗೂ ಕೆಲಸ ಮಾಡಲು ಆಗುತ್ತಿಲ್ಲ. ಇದರಿಂದ ಸಂಪೂರ್ಣ ಸರ್ಕಾರದ ಆಡಳಿತಕ್ಕೆ ಹೊಡೆತ ಬಿಳುತ್ತಿದೆ. ಮೊದಲಿನಿಂದಲೂ ಯಡಿಯೂರಪ್ಪ ಅವರು ಪಕ್ಷವನ್ನ ಕಟ್ಟಿ ಬೆಳೆಸಿದವರು.
ಅದಕ್ಕಾಗಿ ಅವರು ಪಕ್ಷದ ವರಿಷ್ಠರು ಹೇಳಿದಂತೆ ಕೇಳುತ್ತೇನೆ ಎಂದಿದ್ದಾರೆ.
ಮಾಧ್ಯಮದಲ್ಲಿ ನೋಡಿ ಬೇಸರಗೊಂಡು ಅವರು ಈ ಹೇಳಿಕೆ ನೀಡಿರಬಹುದು. ಅದರಲ್ಲಿ ವಿಶೇಷ ಅರ್ಥ ಇಲ್ಲ ಎಂದರು.
ಕಳೆದ 5-6 ತಿಂಗಳಿಂದ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಎಲ್ಲಿ ಈ ಚರ್ಚೆ ಹುಟ್ಟಿತು, ಏನು ಅಂತ ಗೊತ್ತಾಗುತ್ತಿಲ್ಲ. ಈಗ ನಾಯಕತ್ವ ಬದಲಾವಣೆ ಚರ್ಚೆಯೇ ಇಲ್ಲ.
ವರಿಷ್ಠರು ಮತ್ತು ನಮ್ಮ ಹಂತದಲ್ಲೂ ಸಹ ಬದಲಾವಣೆ ಚರ್ಚೆ ನಡೆದಿಲ್ಲ. ಯಾವುದೋ ವ್ಯವಸ್ಥೆಯಲ್ಲಿ ಪರ್ಯಾಯ ನಾಯಕರು ಇರತ್ತಾರೆ. ಅದನ್ನೇ ಸಿಎಂ ಹೇಳಿರುವಂತದ್ದು.
ವಯಸ್ಸು ಅವರ ಕೆಲಸಕ್ಕೆ ಏನೂ ಅಡ್ಡಿ ಬಂದಿಲ್ಲ.
ಸಹಿ ಸಂಗ್ರಹ ವಿಚಾರ ಕೂಡಾ ನನ್ನ ಗಮನಕ್ಕೆ ಬಂದಿಲ್ಲ ಎಂದರು.
ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಪ್ರತಿಶತ 5 ಕ್ಕಿಂತ ಕಡಿಮೆ ಬರೊವರೆಗೂ ರಾಜ್ಯದಲ್ಲಿ ಅನ್ ಲಾಕ್ ಆಗುವದಿಲ್ಲ.
ಜೂನ್ 14 ನಂತರ ಎಲ್ಲವೂ ಒಮ್ಮೆಲೆ ಧಿಡೀರ್ ಅಂತ ಅನ್ ಲಾಕ್ ಮಾಡಲ್ಲ. ಹಂತ ಹಂತವಾಗಿ ರಾಜ್ಯದಲ್ಲಿ ಅನ್ ಲಾಕ್ ಮಾಡಲಾಗುವುದು ಎಂದರು.