ಹುಬ್ಬಳ್ಳಿ : ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದ ತುಂಬ ಇವತ್ತು ಸ್ವಚ್ಚವಾದ ರಸ್ತೆ ಎಲ್ಲೇಡೆ ಕ್ರಿಮಿನಾಶಕ ಪೌಡರ್ ಸಿಂಪಡಣೆ ಜೊತೆ ಸುವ್ಯವಸ್ಥಿತವಾದ ವಾತಾವರಣ ಆಸ್ಪತ್ರೆಗೆ ಬರೋ ರೋಗಿ ಹಾಗೂ ಸಾರ್ವಜನಿಕರಿಗೆ ದರ್ಶನವಾಯ್ತು.
ಹೌದು ! ಕುಂದಗೋಳ ತಾಲೂಕ ಆಸ್ಪತ್ರೆಯಲ್ಲಿ ಇಷ್ಟೇಲ್ಲಾ ನೈರ್ಮಲ್ಯ ವಾತಾವರಣ ಒಂದೇ ದಿನದಲ್ಲಿ ಕಾಣಲು ಮುಖ್ಯ ಕಾರಣ ತಾಲೂಕು ಆಸ್ಪತ್ರೆ ಆವರಣದಲ್ಲಿ ಎಮ್.ಆರ್.ಪಿ.ಎಲ್ ಕಂಪನಿಯ ಪ್ರತಿ ನಿಮಿಷಕ್ಕೆ 500 ಲೀಟರ್ ಸಾಮರ್ಥ್ಯದ ಆಕ್ಸಿಜನ್ ದ್ರವ ಉತ್ಪಾದನೆ ಘಟಕ ನಿರ್ಮಾಣ ಕಾರ್ಯದ ಭೂಮಿ ಪೂಜೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಜಿಲ್ಲಾ ಉಸ್ತುವಾರಿ ಮಂತ್ರಿ ಜಗದೀಶ್ ಶೆಟ್ಟರ್, ಶಾಸಕಿ ಕುಸುಮಾವತಿ ಶಿವಳ್ಳಿ ಜಿಲ್ಲಾಧಿಕಾರಿ ನಿತೇಶ್ ಪಟೇಲ್ ಮಾಜಿ ಶಾಸಕ ಕೃಷಿ ಉತ್ಪನ್ನ ಮತ್ತು ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡರ,ಬಿಜೆಪಿ ಮುಖಂಡ ಎಂ.ಆರ್.ಪಾಟೀಲ ಆಗಮಿಸಿ ತಾಲೂಕು ಆಸ್ಪತ್ರೆಗೆ ಆಕ್ಸಿಜನ್ ಅಭಾವ ತಪ್ಪಿಸಲು ಘಟಕ ನಿರ್ಮಾಣಕ್ಕೆ ಪೂಜೆ ನೇರವೇರಿಸಿದರು.
ಇದೇ ಸುಸಂದರ್ಭ ಒದಗಿ ಬಂದಿದ್ದಕ್ಕೆ ತಾಲೂಕು ಆಸ್ಪತ್ರೆ ಆವರಣ ಇಂದು ಸ್ವಚ್ಚತೆ ಕಂಡಿತು ಜೊತೆಗೆ ಕೋವಿಡ್ ರೋಗಿಗಳ ಮುಖ್ಯವಾದ ಆಕ್ಸಿಜನ್ ಘಟಕವೂ ಒದಗಿ ಬಂತು.