ಹುಬ್ಬಳ್ಳಿ ; ಕೋವೀಡ್ -19 ಕಟ್ಟುನಿಟ್ಟಾಗಿ ಕಟ್ಟಿಹಾಕಲು ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಗುರುವಾರ ನಗರದ ಚೆನ್ನಮ್ಮ ಸರ್ಕಲ್ ಬಳಿ ಬೇಕಾಬಿಟ್ಟಿ ತಿರುಗಾಡುತಿದ್ದ ಬಾಲಕನಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಕಮೀಷನರರೇಟ್ ಸಂಚಾರ ವಿಭಾಗದ ಡಿಸಿಪಿ ಆರ್.ಬಿ. ಬಸರಗಿ ಬಾಲಕನಿಗೆ ಅನಗತ್ಯವಾಗಿ ತಿರುಗಾಡದಂತೆ ಶಿಸ್ತಿನ ಪಾಠ ಹೇಳಿದರು.
ಸೈಕಲ್ ಮೇಲೆ ಅನಗತ್ಯವಾಗಿ ತಿರುಗಾಡುತಿದ್ದಾಗ ಬಸರಗಿ ಅವರು ಬಾಲಕಿನಿಗೆ ನಿನ್ನ ಹೆಸರು, ಮನೆ ಎಲ್ಲಿ ಯಾಕೆ ಇಲ್ಲಿಗೆ ಬಂದಿ ಅಂತಾ ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿದರು. ಕೂಡಲೇ ಬಾಲಕನನ್ನು ತನ್ನ ಜೊತೆಗೆ ಪಡಿತರ ತರಲು ಹೋದ ಬಗ್ಗೆ ಬಸರಗಿ ಅವರಿಗೆ ಬಾಲಕನ ತಂದೆ ಮನವಿ ಮಾಡಲು ಮುಂದಾದರು. ತಂದೆಗೂ ಸಹ ಅನಗತ್ಯವಾಗಿ ಮಕ್ಕಳನ್ನು ತಮ್ಮ ಜೊತೆಗೆ ಕರೆದುಕೊಂಡು ಬಾರದಂತೆ ತಾಕೀತು ಮಾಡಿ ಇನ್ನೊಂದು ಸಲ ಈ ರೀತಿಯ ತಿರುಗಾಡಿದರೆ ಬೆಚ್ಚಗೆ ಮಾಡಬೇಕಾದಿತು ಎಂದರು.
