ಹುಬ್ಬಳ್ಳಿ : ವಿಶ್ವ ಹಿಂದೂ ಪರಿಷತ್ ಘಟಕದಿಂದ ಹುಬ್ಬಳ್ಳಿ ತಾಲೂಕಿನ ಹೆಬಸೂರು ಹಾಗೂ ಕಿರೇಸೂರು ಗ್ರಾಮದಲ್ಲಿ ಕೋವಿಡ್ ಸೊಂಕಿತರ ಕುಟುಂಬಕ್ಕೆ ಆಹಾರ ಧಾನ್ಯ ಕಿಟ್ ವಿತರಣೆ ಮಾಡಲಾಯಿತು.
ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಅಧ್ಯಕ್ಷ ಹಾಗೂ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ 38 ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರರ ಪ್ರಕಾಶ್ ನಾಶಿ, ತಾ.ಪಂ.ಇಓ ಗಂಗಾಧರ ಕಂದಕೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.