ಅಪರಾಧಗಳ ಕೃತ್ಯಕ್ಕೆ ಕಡಿವಾಣ ಹಾಕಲು :
ರೌಡಿ ಶೀಟರ್’ಗಳಿಗೆ ಖಡಕ್ ವಾರ್ನಿಂಗ್
ಹುಬ್ಬಳ್ಳಿ : ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಅಪರಾಧಗಳ ಪ್ರಕರಣಗಳು ಹೆಚ್ಚಾಗಿತ್ತಿರುವ ಹಿನ್ನಲೆಯಲ್ಲಿ ಹು-ಧಾ ಪೊಲೀಸ್ ಆಯುಕ್ತರಾದ ರಮನ್ ಗುಪ್ತಾ ಅವರ ಸೂಚನೆ ಮೇರೆಗೆ ರೌಡಿ ಶೀಟರ್ ಗಳ ದಿನನಿತ್ಯದ ದಿನಚರಿಗಳ ಕುರಿತು ಡಿಸಿಪಿ ಸಾಹೀಲ್ ಬಾಗ್ಲಾ ಅವರ ನೇತೃತ್ವದಲ್ಲಿ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆನ್ನಲಾಗಿದೆ
ಹಳೇ ಹುಬ್ಬಳ್ಳಿ ಹಾಗೂ ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇಂದು ಸಂಜೆ ಕಸಬಾ ಪೇಟೆ ಪೊಲೀಸ್ ಠಾಣೆಗೆ ನೂರಕ್ಕೆ ಹೆಚ್ಚು ರೌಡಿ ಶೀಟರ್ ಗಳು ಹಾಗೂ ಪುಡಿ ರೌಡಿಗಳನ್ನು ಕರೆಯಿಸಿ ಪೊಲೀಸ್ ಇನ್ಸ್ಪೆಕ್ಟರ್ ಗಳು ಖಡಕ್ ವಾರ್ನಿಂಗ್ ನೀಡಿದ್ದು, ಹುಬ್ಬಳ್ಳಿಯಲ್ಲಿ ಅಪರಾಧಗಳ ಸಂಖ್ಯೆ ಹತ್ತಿಕ್ಕುವ ಹಾಗೂ ಅಪರಾಧಗಳ ಕೃತ್ಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪೊಲೀಸ್ ಪಡೆ ರೌಡಿಗಳಿಗೆ ಸಂಬಂಧಿಸಿದಂತಹ ನಗರದಲ್ಲಿ ಯಾವುದೇ ಘಟನೆಗಳು ನಡೆದರೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಅಂತೂ-ಇಂತೂ ಪೊಲೀಸ್ ಪಡೆ ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದೇ ಆದಲ್ಲಿ, ಮುಂದಿನ ದಿನಗಳಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತಾ ಇಲ್ಲವಾ ಎಂಬುದನ್ನು ನೋಡಬೇಕಿದೆ.
ಒಟ್ಟಿನಲ್ಲಿ ಹೇಳುವುದಾದರೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಅಪರಾಧಗಳ ಸಂಖ್ಯೆ ಹತ್ತಿಕ್ಕಲು ಹಾಗೂ ರೌಡಿಗಳ ಅಪರಾಧಗಳ ಕೃತ್ಯಕ್ಕೆ ಕಡಿವಾಣ ಹಾಕಲು ನೂತನ ಪೊಲೀಸ್ ಆಯುಕ್ತರು ಯಶಸ್ವಿಯಾಗಲಿ ಎಂಬುದೇ ಸಾರ್ವಜನಿಕರ ಆಶಯವಾಗಿದೆ.