ಹುಬ್ಬಳ್ಳಿ : ಕ್ಷುಲ್ಲಕ ವಿಚಾರಕ್ಕೆ ಯುವಕರ ನಡುವೆ ಜಗಳವಾಗಿ ಓರ್ವ ಯುವಕನಿಗೆ ಚಾಕು ಇರಿತ ಆಗಿರುವ ಘಟನೆ ಭಾನುವಾರ ರಾತ್ರಿ ಹುಬ್ಬಳ್ಳಿಯಲ್ಲಿ ನಡೆದಿದೆ .
ಭಾನುವಾರ ರಾತ್ರಿ ಸಂದೀಪ್ ಹಾಗೂ ಇನ್ನಿಬ್ಬರ ನಡುವೆ ಜಗಳವಾಗಿ ಅದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು . ಈ ವೇಳೆ ಸಂದೀಪ ಎಂಬ ಯುವಕನಿಗೆ ಕೈ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದ ಪರಿಣಾಮ ಸಂದೀಪ ಗಾಯಗೊಂಡಿದ್ದಾನೆ . ಕೂಡಲೇ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದ್ದು , ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.