ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಚೌಡಯ್ಯಧಾನಪುರ ಬಳಿ ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದ ಭತ್ತದ ಹುಲ್ಲಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿ ವಾಹನವೇ ಬಹುತೇಕ ಸುಟ್ಟು ಘಟನೆ ನಡೆದಿದೆ .
ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ . ಮೇವಿಗೆ ಬೆಂಕಿ ಹತ್ತಿದ ತಕ್ಷಣ ಎಚ್ಚೆತ್ತ ಟ್ರ್ಯಾಕ್ಟರ್ ಚಾಲಕ ಮೇವಿನ ಬಣವೆಯನ್ನು ಅಲ್ಲಿಂದ ಕೆಳಗಿಳಿಸಿದ್ದಾರೆ. ರಾಣಿಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.