ಹುಬ್ಬಳ್ಳಿ : ಮನೆ ಕೀಲಿ ಮುರಿದು ಮನೆಯಲ್ಲಿದ್ದ ಆಭರಣ ಹಾಗೂ ಹಣ ಕಳ್ಳತನ ಮಾಡಿರುವ ಘಟನೆ ಹಳೇ ಹುಬ್ಬಳ್ಳಿ ತಿಮ್ಮಸಾಗರದ ಅಗ್ರಹಾರದಲ್ಲಿ ನಡೆದಿದೆ.
ಮದನ ದೇಶಪಾಂಡೆ ಎಂಬುವರ ಮನೆ ಕೀಲಿ ಮುರಿದ ಕಳ್ಳರು 98 ಸಾವಿರ ಮೌಲ್ಯದ ಚಿನ್ನ ಆಭರಣ ಹಾಗೂ 18 ಸಾವಿರ ನಗದು ಕಳ್ಳತನ ಮಾಡಲಾಗಿದ್ದು ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Hubli News Latest Kannada News