ಹುಬ್ಬಳ್ಳಿ : ಚುನಾವಣೆಯಲ್ಲಿ ಬಿಜೆಪಿ ವೋಟ್ ಕದಿಯೋ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡ ಅವರು
ಬಿಜೆಪಿಯವರಿಗೆ ಸೋಲ್ತೀವಿ ಅನ್ನೋ ಮಾಹಿತಿ ಸಿಕ್ಕಿದೆ. ಹೀಗಾಗಿ ಸಚಿವ ಅಶ್ವಥ್ ನಾರಾಯಣ ಅವರಿಗೆ ಸೇರಿದ ಚಿಲುಮೆ ಕಂಪನಿಯವರಿಗೆ ಪೊಲೀಂಗ್ ಆಫೀಸರ್ ಆಗಿ ನೇಮಕ ಮಾಡಿದ್ದಾರೆ. ಅವರೆಲ್ಲ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿಗಳು, ಅಶ್ವಥ್ ನಾರಾಯಣ,ತುಷಾರ್ ಗಿರಿನಾಥ್ ಮೇಲೆ ದೂರು ದಾಖಲಾಗಬೇಕು. ಇದು ಕೇವಲ ಬೆಂಗಳೂರು ಬಿಬಿಎಂಪಿ ಅಲ್ಲ ಇಡೀ ರಾಜ್ಯದಲ್ಲಿ ಈ ಕಂಪನಿಯಿಂದ ಕೆಲಸ ಶುರುವಾಗಿದೆ. ಚುನಾವಣೆಯಲ್ಲಿ ಬಿಜೆಪಿ ವೋಟ್ ಕದಿಯೋ ಕೆಲಸ ಮಾಡ್ತೀದೆ. ಇದರ ವಿರುದ್ದ ಹೋರಾಟ ಮಾಡ್ತೀವಿ. ನಾಳೆ ಬೆಂಗಳೂರಿನಲ್ಲಿ ನಮ್ಮ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಗೆ ರಾಜ್ಯದಲ್ಲಿ ಆಯುಷ್ಯ ಇಲ್ಲ. ಇದೇ ತಂತ್ರಗಾರಿಕೆಯನ್ನು ಕೇವಲ ಬೆಂಗಳೂರು ಅಲ್ಲ, ರಾಜ್ಯದ ಎಲ್ಲ ಕಡೆ ಮಾಡಬೇಕ ಅಂತಾ ಹೊರಟಿದ್ರು.
ಇವರ ಉದ್ದೇಶ ಇವಿಎಮ್ ಹ್ಯಾಕ್ ಮಾಡೋದು, ವೋಟ್ ಡಿಲೀಟ್ ಮಾಡೋದು ಎಂದ ಸಲೀಂ ಅಹ್ಮದ್ ಹರಿಹಾಯ್ದರು.