ಹುಬ್ಬಳ್ಳಿ : ನನ್ನ ಗಂಡನನ್ನ ಮತಾಂತರಕ್ಕೆ ಒತ್ತಡ ಮಾಡಿಲ್ಲ. ನಾನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿಲ್ಲ ಎಂದು ಸಂಪತ್ ಬಗನಿ ಪತ್ನಿ ಭಾರತಿ ಸ್ಪಷ್ಟಪಡಿಸಿದ್ದಾರೆ.
ಪತ್ನಿ ನನಗೆ ಬಲವಂತದ ಮತಾಂತರವಾಗಲು ಒತ್ತಾಯಿಸುತ್ತಿದ್ದಾಳೆ ಸಂಪತ್ ಬಗನಿ ನಿನ್ನೆ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದ. ಇಂದು ಎಸಿಪಿ ಕಚೇರಿಯಲ್ಲಿ ಪ್ರತ್ಯಕ್ಷವಾದ ಪತಿ ವಿರುದ್ಧ ಪ್ರತಿದೂರು ನೀಡಲು ಆಗಮಿಸಿ ಮಾತನಾಡಿದ ಅವರು,
ವೈಯಕ್ತಿಕ ನಂಬಿಕೆ ಕಾರಣಕ್ಕೆ ಚರ್ಚೆಗೆ ಹೋಗ್ತೇನೆ. ಯಾರನ್ನೂ ಮತಾಂತರಗೊಳ್ಳುವಂತೆ ಪ್ರೇರೇಪಿಸಿಲ್ಲ. ನನ್ನನ್ನ ನನ್ನ ಪತಿ ಬಿಟ್ಟು 13 ವರ್ಷವಾಯಿತು.
ನನ್ನ ತವರು ಮನೆಯಲ್ಲಿ ನಾನು ಇರುತ್ತೇನೆ. ಈ ಮತಾಂತರದ ಪ್ರಶ್ನೆಯೇ ಇಲ್ಲ. ಉಚಿತ ಗ್ಯಾಸ್ ಕಬಳಿಸೋಕೆ ಈ ರೀತಿ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ನಿನ್ನೆ ಭಾರತಿ ಪತಿ ಸಂಪತ್ ಮತಾಂತರ ಮಾಡ್ತೀದಾರೆ ಎಂದು ಶಿಕ್ಕಲಗಾರ ಸಮಾಜದ ಮುಖಂಡರು ಹಾಗೂ ಹಿಂದೂ ಕಾರ್ಯಕರ್ತರು ಹಳೆ ಹುಬ್ಬಳ್ಳಿ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಕ್ರಮಕ್ಕೆ ಆಗ್ರಹಿಸಿದ್ದರು.