ಹುಬ್ಬಳ್ಳಿ : ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಐದು ಮನೆಗಳು ಬೆಂಕಿಗೆ ಆಹುತಿ ಆದ ಘಟನೆ ಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮದಲ್ಲಿ ನಡೆದಿದೆ.
ಮಲ್ಲೇಶಪ್ಪ, ಖಾಸಿಂಸಾಬ್, ದಾವಲಸಾಬ್, ಅಶೋಕಪ್ಪ ಹಾಗೂ ರಮೇಶಪ್ಪ ಎಂಬಾತರ ಮನೆಗಳೇ ಸುಟ್ಟು ಕಲಕರಾಗಿದ್ದು, ಇಂದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ನಂತರ ಬೆಂಕಿ ವ್ಯಾಪಿಸಿದ ಪರಿಣಾಮವಾಗಿ ಏಕಾಏಕಿ ಸಿಲಿಂಡರ್ ಬ್ಲಾಸ್ಟ್ ಆಗಿ ಖಾಸಿಂಸಾಬ್ ಮತ್ತು ದಾವಲಸಾಬ್ ಎಂಬಾತರ ಮನೆ ಸಂಪೂರ್ಣ ಸುಟ್ಟು ಹೋಗಿ, ಮನೆಯಲ್ಲಿನ 8 ಲಕ್ಷ ರೂ ಸೇರಿದಂತೆ ಇನ್ನಿತರ ವಸ್ತುಗಳು ಸುಟ್ಟು ಹೋಗಿವೆ. ಅದೃಷ್ಟವಶಾತ್ ಘಟನೆ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ.
ಇನ್ನು ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದು, ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.