ಹುಬ್ಬಳ್ಳಿ : ಬಿಜಾಪುರ, ಕೊಳ್ಳೆಗಾಲ ಸೇರಿದಂತೆ ಬಾಕಿ ಉಳಿದ ಮಹಾನಗರ ಪಾಲಿಕೆ ಉಪ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಪಡೆದಿದೆ. ಕೊಳ್ಳೆಗಾಲದಲ್ಲಿ ಎರಡರಲ್ಲಿ ಆರು ಸ್ಥಾನ, ವಿಜಯಪುರದಲ್ಲಿ ನಮ್ಮದೇ ಅಧಿಕಾರ ಬಂದಿದೆ. ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನೆ
ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಜನರು ಮೆಚ್ಚಿದ್ದಾರೆ ಎನ್ನುವುದಕ್ಕೆ ಇದು ಉದಾಹರಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ 40% ಕಮಿಷನ್ ಆರೋಪವನ್ನು ಜನರು ನಂಬಿಲ್ಲ. ಕೈ ಅನ್ನು ತಿರಸ್ಕಾರ ಮಾಡಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ..
ರಾಹುಲ್ ಗಾಂಧಿ ಪಾದಯಾತ್ರೆ ಮಾಡಿದರುವ ಕ್ಷೇತ್ರದಲ್ಲಿಯೇ ಬಿಜೆಪಿಗೆ ಹೆಚ್ಚು ಮತಗಳು ಬಂದಿವೆ..
ಭಾರತ ಜೋಡೋದಿಂದ ಯಾರಿಗೂ ಪರಿಣಾಮ ಬೀರಿಲ್ಲ. ಡಿಕೆಶಿ, ಸಿದ್ದರಾಮಯ್ಯ ಜೋಡಿ ಒಂದಾಗಲಿಲ್ಲ. ಪಕ್ಷದ ಕಾರ್ಯಕರ್ತರು, ಮುಖಂಡರು ಶಾಸಕರು ಒಟ್ಟಾಗಿ ಕೆಲಸ ಮಾಡಿದ ಪರಿಣಾಮದಿಂದ ಈ ಫಲಿತಾಂಶ ಬಂದಿದೆ. 40% ಕಮಿಷನ್ ಆರೋಪ ಇದು ಕಾಂಗ್ರೆಸ್ ಎಜೆಂಟರ್ ಕಥೆಯಾಗಿದೆ ಎಂದರು.
ಲೋಕಾಯುಕ್ತಕ್ಕೆ ಕಾಂಗ್ರೆಸ್ ನವರು ಜೀವ ತೆಗೆದಿದ್ದರು, ಆದರೆ ನಾವು ಮರು ಜೀವ ನೀಡಿದ್ದೇವೆ.ಕಾಂಗ್ರೆಸ್ ನವರಿಗೆ ಭ್ರಷ್ಟಾಚಾರದ ಬಗ್ಗೆ ದೂರು ನೀಡಲಿ. ಇದು ಸಿದ್ದರಾಮಯ್ಯ ಅವರ ಒಳತಂತ್ರಗಾರಿಕೆ. ಸಿದ್ದರಾಮಯ್ಯ ಅವರು ಬೇಕಾದರೆ ಲೋಕಾಯುಕ್ತಕ್ಕೆ ದೂರು ಕೊಡಲಿ.
ಕಾಂಗ್ರೆಸ್ ನಲ್ಲಿ ಅತಿ ಹೆಚ್ಚು ಗುತ್ತಿಗೆದಾರರು ಕಾಂಗ್ರೆಸ್ ನ ಏಜೆಂಟ್ ರಾಗಿ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆದಾರರು ಕಾಂಗ್ರೆಸ್ ಪಕ್ಷದ ಸೀಟ್ ಕೇಳಲು ಹೋಗುತ್ತಿದ್ದಾರೆ. ಅದಕ್ಕೆ ಅವರು ಭ್ರಷ್ಟಾಚಾರ ಆರೋಪ ಮಾಡಿ ಎಂದು ಹೇಳುತ್ತಿದ್ದಾರೆ ಅದಕ್ಕಾಗಿ ಅವರು ಈ ಆರೋಪ ಮಾಡುತ್ತಿದ್ದಾರೆ ಎಂದರು.
Hubli News Latest Kannada News