ಹುಬ್ಬಳ್ಳಿಯ ಕಿಮ್ಸನಲ್ಲಿ ಸಾವಿಗೀಡಾದ ವ್ಯಕ್ತಿಯೋರ್ವನ ಶವ ತೆಗೆದುಕೊಂಡು ಬರಲು ಹೊರಟಿದ್ದ ಕ್ರೂಸರ್ ವಾಹನಕ್ಕೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ಕಲಘಟಗಿ ತಾಲೂಕಿನ ರಾಮನಾಳ ಕ್ರಾಸ್ ಬಳಿ ನಡೆದಿದೆ.
ಮೃತರು ಹಳಿಯಾಳ ತಾಲೂಕಿನ ನಂದಿಗಟ್ಟ ಗ್ರಾಮದವರು. ಕಿಮ್ಸ್ ನಲ್ಲಿ ಮೃತಪಟ್ಟ ವ್ಯಕ್ತಿ ಶದವ ತಗರದುಕೊಂಡು ಹೋಗಲು ಆಗಮಿಸುತ್ತಿದ್ದಾಗ ಕ್ರೂಸರ್ ವಾಹನಕ್ಕೆ ರಾಮನಾಳ ಕ್ರಾಸ್ ಬಳಿ ಸೀಬರ್ಡ್ ಬಸ್ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ನಂದಿಗಟ್ಟದ ಶಿವನಗೌಡ ಪಾಟೀಲ, ಅಮೃತ ಪಾಟೀಲ ಸಾವಿಗೀಡಾಗಿದ್ದಾರೆ. ಚಾಲಕ ಮಾರುತಿ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ದೇವೆಂದ್ರ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ರಭಸಕ್ಕೆ ಕ್ರೂಸರ್ ವಾಹನ ಎರಡು ತುಂಡಾಗಿದೆ. ಈ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.