ಹುಬ್ಬಳ್ಳಿ : ಕ್ಷುಲ್ಲಕ ಕಾರಣಕ್ಕೆ ತಂಟೆ ತೆಗೆದು ಯುವಕನೊರ್ವನ ಮೇಲೆ ಹಲ್ಲೇ ನಡೆಸಿ ಗಾಯಗೊಳಿಸಿದ ಘಟನೆ ಇಲ್ಲಿನ ಕುಸುಗಲ್ ರಸ್ತೆಯ ಸೆಲ್ ಪೆಟ್ರೋಲ್ ಬಂಕ್ ನಳಿ ಸೋಮವಾರ ತಡರಾತ್ರಿ ನಡೆದಿದೆ.
ಉತ್ತರ ಪ್ರದೇಶ ಮೂಲದ ರೋಹಿತ್ ಕುಮಾರ ಎಂಬಾತನೇ ಹಲ್ಲೇಗೆ ಒಳಗಾದ ಯುವಕನಾಗಿದ್ದು, ಎಂದಿನಂತೆ ಸ್ಟ್ರೀಟ್ ಫಾಸ್ಟ್ ಪುಡ್ ಮಾರಾಟ ಮಾಡುತ್ತಿರುವ ವೇಳೆಯಲ್ಲಿ ಅಪರಿಚಿತ ಯುವಕರ ಗುಂಪೊಂದು ಅಂಗಡಿಗೆ ಬಂದು ಸುಖಾಸುಮ್ಮನೆ ಬೈಯುವುದು ಮಾಡಿ ತಂಟೆ ತೆಗೆದು ಹಲ್ಲೇ ನಡೆಸಿದೆ. ಪರಿಣಾಮ ಗಾಯಗೊಂಡ ರೋಹಿತ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಈ ಘಟನೆ ಕೇಶ್ವಾಪುರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.