ಹುಬ್ಬಳ್ಳಿ : ಯುವತಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ನಿಖಿಲ್ ದಾಂಡೇಲಿ ತಮ್ಮ ಪತ್ನಿಯನ್ನು ಚೇತನ್ ಹಿರೇಕೆರೂರ ಹಾಗೂ ಇತರರು ಅಪಹರಣ ಮಾಡಿದ್ದಾರೆ ಎಂದು ಗೋಕುಲ ಪೊಲೀಸ್ ಠಾಣೆಯಲ್ಲಿ ಜೂ. 24 ರಂದು ಪ್ರಕರಣ ದಾಖಲಿಸಿದ್ದರು ಪೊಲೀಸರು ಸಹನಾ ಅವರನ್ನು ಗೋವಾದಲ್ಲಿ ಪತ್ತೆ ಮಾಡಿ ಹುಬ್ಬಳ್ಳಿಗೆ ಕರೆತಂದಿದ್ದರು, ಕೆಲ ದಿನಗಳ ಹಿಂದೆ ಗೋಕುಲ್ ರೋಡ್ ಪೊಲೀಸರು ಚೇತನ್ ಹಿರೇಕೆರೂರು ಹಾಗೂ ಇತರರನ್ನು ಬಂಧಿಸಿದ್ದರು ಇದೀಗ ನ್ಯಾಯಾಲಯವು ಕೆಲ ಷರತ್ತುಗಳ ಅನ್ವಯ ಜಾಮೀನು ನೀಡಿದೆ.