ಹುಬ್ಬಳ್ಳಿ: ರಕ್ತದಾನ ಶಿಬಿರ ಆಯೋಜನೆ ಮಾಡುವ ಮೂಲಕ ಹುಬ್ಬಳ್ಳಿಯ 9 ವರ್ಷದ ಹುಡುಗ ಹುಟ್ಟು ಹಬ್ಬ ಆಚರಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾನೆ. ಲಕ್ಷಯ್ ಅಂಬಾತನೇ ಹುಟ್ಟು ಹಬ್ಬ ಆಚರಣೆ ಮಾಡಿದ್ದು, ಈತ ಹುಬ್ಬಳ್ಳಿಯ ಪಡದಯ್ಯನ ಹಕ್ಕಲದ ನಿವಾಸಿಯಾಗಿದ್ದಾನೆ. ಶಂಕ್ರಣ ದೊಡ್ಡಮನಿ, ಶಿಲ್ಪಾ ದೊಡ್ಡಮನಿ ದಂಪತಿಗಳ ಮಗನಾದ ಲಕ್ಷಯ್ ನಾಲ್ಕು ವರ್ಷವನಿದ್ದಾಗಿನಿಂದ ಸಾಮಾಜಿಕ ಸೇವೆ ಮಾಡುತ್ತಾ ಬರುತ್ತಿದ್ದಾನೆ. ಅದರಂತೆ ಇದೀಗ ತನ್ನ 9 ವರ್ಷದ ಹುಟ್ಟು ಹಬ್ಬವನ್ನು ರಕ್ತದಾನ ಶಿಬಿರವನ್ನು ಆಯೋಜಿಸಿ ಆಚರಣೆ ಮಾಡಿಕೊಂಡಿದ್ದಾನೆ.
ಇನ್ನು ಇತ್ತೀಚಿನ ದಿನಗಳಲ್ಲಿ ಜನ್ಮ ದಿನಾಚರಣೆಯನ್ನು ಪಬ್ , ರೆಸಾರ್ಟ್ ಗಳಲ್ಲಿ ಅದ್ದೂರಿಯಾಗಿ ಪಾರ್ಟಿ ಕೊಡುವುದರ ಮೂಲಕ ಸೆಲೆಬ್ರೇಷನ್ ಮಾಡಿಕೊಳ್ಳುವ ಈಗೀನ ಕಾಲದಲ್ಲಿ ಲಕ್ಷಯ್ ಸರಳವಾಗಿ ಅದು ರಕ್ತದಾನದ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಿಕೊಂಡಿದ್ದಾನೆ. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ನಡೆದ ಈ ಶಿಬಿರದಲ್ಲಿ 100 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಲಕ್ಷಯ್ ತಂದೆ ಶಂಕ್ರಣ ದೊಡ್ಡಮನಿ, ಶಿಲ್ಪಾ ದೊಡ್ಡಮನಿ, ಚಿಕ್ಕಪ್ಪ ಮಂಜುನಾಥ ಶಾಬಾದ್, ಸತೀಶ ಛಲವಾದಿ, ಪ್ರಕಾಶ ಕಲಗುಪ್ಪಿ, ಸಂಜು ಕೊತ್ತದಾರಿ, ಶ್ರೀನಾಥ್ ನರೆಗಲ್ಣ ಷರೀಫ್ ಸೇರಿದಂತೆ ಪಡದಯ್ಯನ ಹಕ್ಕಲದ ನಿವಾಸಿಗಳು ಇದ್ದರು.