ಬ್ಯಾಡ್ ಬ್ರೋ ಚಿತ್ರವೂ ಬಿಡುಗಡೆಗೆ ಸಿದ್ದವಾಗಿದ್ದು , ಇದೇ ತಿಂಗಳು ಜೂನ್ 18 ರಂದು ಓಟಿಟಿ ಜಗತ್ತಿಗೆ ಕನ್ನಡಿಗರ ಕಟ್ಟೆ ಆಪ್ ಮೂಲಕ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ ನಿರ್ದೇಶಕ ರಿಯಾಜ್ ಮೋಖಾಶಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಚಿತ್ರದ ಟ್ರೈಲರ್ ಜೂನ್ 13 ಸೋಮವಾರದಂದು ಟೀಮ್ ಹುಬ್ಬಳ್ಳಿ ಯೂಟ್ಯೂಬ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಲಿದೆ, ಚಿತ್ರದಲ್ಲಿ ಸಂತೋಷ್ ಚಿಕ್ಕಣ್ಣವರ್ , ಶ್ರೀನಿಧಿ ಪೂಜಾರ್ , ಶೃತಿ ಹಾಸನ್ , ಅಭಿ ರಾಚಶೆಟ್ಟಿ , ಮಂಜು ಪೂಜಾರ , ಕಿರಣ್ ,ಅರುಣ್ , ನೇತ್ರ ಸುರೇಶ್ ,ಪ್ರೇಮ್ ಸೇರಿದಂತೆ ಹಲವಾರು ಹೊಸ ಕಲಾವಿದರು ನಟಿಸಿದ್ದು ಚಿತ್ರಕ್ಕೆ ರಕ್ಷಿತ್ ಸರಿಪಲ್ಲ ಅವರ ಸಂಗೀತವಿದೆ, ಹಾಗೂ ಸೂರಜ್ ಪೂಜಾರಿ ಸಂಕಲನ, ಅರುಣ್ ಚಿಕ್ಕಮಠ ಅವರು ಕ್ಯಾಮೆರಾ ವರ್ಕ್ ಮಾಡಿದ್ದಾರೆ , ಆಕಾಶ್ ಹರವಿ ಅವರು ಕ್ರಿಯೇಟಿವ್ ಹೆಡ್ ಆಗಿ ವರ್ಕ್ ಮಾಡುತ್ತಿದ್ದಾರೆ , ಇದೇ ಜೂನ್ 18ರಿಂದ ಚಿತ್ರವನ್ನೂ ಕಟ್ಟೆ ಆಪ ಮೂಲಕ ಅಥವಾ Www.katteott.com ಮೂಲಕ ಚಿತ್ರವನ್ನೂ ಸಿನಿಪ್ರೇಮಿಗಳು ತಮ್ಮ ಮೊಬೈಲ್ , ಕಂಪ್ಯೂಟರ್ಗಳಲ್ಲಿ ಚಿತ್ರವನ್ನು ವೀಕ್ಷಿಸಬಹುದು.