ಹುಬ್ಬಳ್ಳಿ: ಆಕೆ ಇನ್ನೂ ಶಾಲೆಗೆ ಹೋಗುವ ವಿದ್ಯಾರ್ಥಿನಿ. ಈಗಷ್ಟೇ 14 ವರ್ಷ ಪೂರೈಸಿದ ಈ ಪ್ರತಿಭೆ. ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾಳೆ. ತನ್ನಲ್ಲಿರುವ ಸೌಂದರ್ಯವನ್ನು ಹಾಗೂ ಟ್ಯಾಲೆಂಟ್ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡುವ ಮೂಲಕ ಸಾಧನೆ ಮಾಡಿದ್ದಾಳೆ. ಹಾಗಿದ್ದರೇ ಯಾರು ಆ ಪ್ರತಿಭೆ..? ಅವಳ ಸಾಧನೆ ಆದರೂ ಏನು ಅಂತೀರಾ ಈ ಸ್ಟೋರಿ ಓದಿ…
ಧಾರವಾಡದ ಗಾಂಧಿನಗರ ನಿವಾಸಿಯಾಗಿರುವ ಶೈನಾ ಧಾರವಾಡದ ಕೆಎಲ್ಇ ಸ್ಕೂಲ್ ನಲ್ಲಿ ಶಿಕ್ಷಣ ಪಡೆಯುತ್ತಿದ್ದಾಳೆ. ಈಗ ತಮ್ಮಲ್ಲಿರುವ ಅಪಾರವಾದ ಪ್ರತಿಭೆಯನ್ನು ಪರಿಚಯಿಸುವ ಮೂಲಕ ಟೈಮ್ಸ್ ಗ್ರೂಪ್ ಇಂಡಿಯಾ ನಡೆಸಿದ ಪ್ರತಿಷ್ಠಿತ ಪ್ರದರ್ಶನವಾದ ದೆಹಲಿ ಟೈಮ್ಸ್ ಫ್ಯಾಷನ್ ರನ್‌ವೇ 2022 ರಲ್ಲಿ ಧಾರವಾಡದ ಉತ್ತರ ಕರ್ನಾಟಕದ ಸುಂದರಿ ಶೈನಾ ಪಂಚಿಕಲ್ ಮೊದಲ ಬಾರಿಗೆ ಮಾಡೆಲ್ ಆಗಿ ನಡೆದಿದ್ದು, ಮಿಸ್ ಟ್ಯಾಲೆಂಟ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೇ ಮಿಸ್ ಇಂಡಿಯಾದ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಇನ್ನೂ ಎಸ್ಫಿರ್ ಫ್ಯಾಶನ್ಸ್ ವ್ಯವಸ್ಥಾಪಕ ನಿರ್ದೇಶಕಿ ಎಸ್ತರ್ ಮೋಹನ್ಕಾ ಅವರ ನಿರ್ದೇಶನದಲ್ಲಿ ಇಂತಹದೊಂದು ಸಾಧನೆ ಮಾಡಿದ್ದು, ನಮ್ಮ ಧಾರವಾಡ ಜಿಲ್ಲೆಯ ಹುಡುಗಿ ಮಿಸ್ ಇಂಡಿಯಾ ಮತ್ತು ಮಿಸ್ ಇಂಡಿಯಾ ಟ್ಯಾಲೆಂಟ್ ಆಗಿ ಹೊರ ಹೊಮ್ಮಿದ್ದು, ಉತ್ತರ ಕರ್ನಾಟಕ ಭಾಗದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಹೊಸ ದೆಹಲಿಯಲ್ಲಿ ನಡೆದ ಫ್ಯಾಷನೋವಾ ಅಂತರಾಷ್ಟ್ರೀಯ ಶೈಲಿಯ ಸಪ್ತಾಹ 2022 ರಲ್ಲಿ ಖ್ಯಾತ ಲಕ್ನೋ ಫ್ಯಾಶನ್ ಡಿಸೈನರ್ ಶ್ರೀ ಮುಖೇಶ್ ದುಬೆ ಸಂಗ್ರಹಗಳನ್ನು ಪ್ರದರ್ಶಿಸಿದ್ದಾರೆ. ಇನ್ನೂ ಧಾರವಾಡದ ಪ್ರತಿಭೆಯೊಂದ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದು, ವಿಶೇಷವಾಗಿದೆ.
ಒಟ್ಟಿನಲ್ಲಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುವಂತೇ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ವಯಸ್ಸಿಗೂ ಮೀರಿದ ಸಾಧನೆ ಮಾಡಿದ್ದು, ನಿಜಕ್ಕೂ ವಿಶೇಷವಾಗಿದೆ.