ಹುಬ್ಬಳ್ಳಿ : ವಿಮಲ್ ಕೊಡಿಸೋ ವಿಚಾರಕ್ಕೇ ಸ್ನೇಹಿತರಲ್ಲೇ ಜಗಳ ಪ್ರಾರಂಭವಾಗಿ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಆನಂದ ನಗರದ ಮೆಹಬೂಬ್ ರಫೀಕ್ ಕಳಸ ಹಾಗೂ ಗೌಸ್ ಮೊದ್ದೀನ್ ಮಂಜುನಾಥ ನಗರ ಬಳಿ ಇರುವ ಕೊಡೆ ಬಾರ್ ಬಳಿಯಲ್ಲಿ ವಿಮಲ್ ಕೊಡಿಸೋ ವಿಚಾರಕ್ಕೇ ಇಬ್ಬರ ನಡುವೆ ಜಗಳ ಆಗಿದೆ.
ಮೆಹಬೂಬ್ ವಿಮಲ್ ಕೊಡಿಸದ ಹಿನ್ನೆಲೆಯಲ್ಲಿ ಜಗಳವಾಡಿದ್ದ ಗೌಸ್ ಮೊದ್ದೀನ್ ಆನಂದ ನಗರ ಸರ್ಕಲ್ ನಲ್ಲಿಯೇ ಮೆಹಬೂಬ್ ಹೊಟ್ಟೆಗೆ ಚಾಕುವನ್ನು ಇರಿದ ಪರಿಣಾಮ ಮೆಹಬೂಬ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೆಹಬೂಬ್ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸಧ್ಯ ಗೌಸ್ ಮೊದ್ದೀನ್ ಎಸ್ಕೇಪ್ ಆಗಿದ್ದು,ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹಳೆ ಹುಬ್ಬಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು,ಕೊಲೆ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ