ಕಲಘಟಗಿ: ಔಷಧಿ ತರಲು ಹೋಗಿ ಬರುತ್ತೇನೆಂದು ಮನೆಯಿಂದ ಹೊರಕ್ಕೆ ಹೋಗಿದ್ದ ವ್ಯಕ್ತಿಯೋರ್ವ ಕಾಣೆಯಾಗಿರುವ ಕುರಿತು ಇಲ್ಲಿನ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚನ್ನಬಸಪ್ಪ ಕಡ್ಲಿ (65) ಕಾಣೆಯಾದವನಾಗಿದ್ದು, ಕಲಘಟಗಿ ತಾಲೂಕಿನ ನೆಲ್ಲಿ ಹರವಿ ಗ್ರಾಮದ ನಿವಾಸಿಯಾಗಿದ್ದಾನೆ. ಈತ ಮಾನಸಿಕ ಅಸ್ವಸ್ಥರಾಗಿದ್ದು, ಪ್ರತಿದಿನ ಔಷಧಿ ತೆಗೆದುಕೊಳ್ಳುತ್ತಿದ್ದರು. ಆದರೆ ಅವು ಮುಗಿದ ಹೋದ ಹಿನ್ನೆಲೆಯಲ್ಲಿ ಔಷಧಿ ತರುವುದಾಗಿ ಮೇ.11 ರಂದು ಮನೆಯಿಂದ ಹೊರಹೊಗಿದ್ದು ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದಾರೆ. ಈ ಕುರಿತು ಆತನ ಪುತ್ರ ರವಿ ಕಲಘಟಗಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
