ಹುಬ್ಬಳ್ಳಿ : ಸಿದ್ದರಾಮಯ್ಯ ಸರ್ಕಾರದ ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರ ಅಕ್ರಮ ನಡೆದಿಲ್ಲ ಎನ್ನುವವರು ಒಮ್ಮೆ ಕೆಂಪಣ್ಣ ವರದಿ ತೆಗೆದು ನೋಡಿಬೇಕು. ಆಗ ಅವರು ಎಷ್ಟು ಪ್ರಾಮಾಣಿಕರು ಎಂಬುವುದು ತಿಳಿಯುತ್ತದೆ. ಇನ್ನೂ ಅರ್ಕಾವತಿ ಹಗರಣದಲ್ಲಿ ಅವರ ಪ್ರಾಮಣಿಕತೆ ಎಷ್ಟು ಇದೆ ಎಂಬುವುದನ್ನು ತೋರಿಸಲಾಗಿದ್ದು, ಅದನ್ನು ಒಮ್ಮೆ ತೆಗೆದು ನೋಡಬೇಕು ಎನ್ನುವ ಮೂಲಕ ಸಿದ್ದರಾಮಯ್ಯನವರ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ ಎಂಬ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಬಿಜೆಪಿ ಪಕ್ಷದ ಅಧಿಕಾರದ ಅವಧಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿ ಅರ್ಕಾವತಿ ಹಗರಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದನ್ನ ಕೆಂಪಣ್ಣ ವರದಿಯಲ್ಲಿಯೇ ಸ್ಪಷ್ಟವಾಗಿ ಹೇಳಲಾಗಿದೆ. ಅದನ್ನೊಮ್ಮೆ ಅವರು ತೆಗೆದು ನೋಡಿದ್ರೆ ಎನ್ನು ನಡೆದಿದೆ ಎಂಬುವುದು ತಿಳಿಯುತ್ತದೆ ಎಂದರು.
*ಗಲಭೆ ಕೋರರೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಸಹೋದರರಿದ್ದಂತೆ.*
ಇದೇ ವೇಳೆ ಹುಬ್ಬಳ್ಳಿ ಗಲಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಗಲಭೆಕೋರರ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಗಲಬೆಕೋರರೆಲ್ಲರೂ ಕಾಂಗ್ರೆಸ್ ಪಕ್ಷದ ಸಹೋದರರಿದ್ದಂತೆ. ಪಾದರಾಯನಪುರ ಗಲಾಟೆ, ಕೆಜೆ ಹಳ್ಳಿ- ಜೆಜೆ ಹಳ್ಳಿ ಗಲಾಟೆ ವೇಳೆಯೂ ಕಾಂಗ್ರೆಸ್ ನಾಯಕರು ಗಲಭೆಕೋರರ ಬೆಂಬಲಕ್ಕೆ ನಿಂತು ಅವರೆಲ್ಲರೂ ಅಮಾಯಕರು ಎಂದು ಸರ್ಟಿಫಿಕೇಟ್ ನೀಡಿದರು. ಆದರೆ ನಮ್ಮ ಅಧಿಕಾರವಧಿಯಲ್ಲಿ ಎಲ್ಲವನ್ನೂ ನಿಯಂತ್ರಿಸುತ್ತಿದ್ದೇವೆ ಎಂದು ತಮ್ಮ ಆಡಳಿತವನ್ನ ಸಮರ್ಥಿಸಿಕೊಳ್ಳುವುದರ ಜೊತೆಗೆ ಕಾಂಗ್ರೆಸ್ ನಾಯಕರ ಗಲಭೆಕೋರರಲ್ಲಿ ಅಮಾಯಕರಿದ್ದಾರೆ ಎಂಬ ಹೇಳಿಕೆಗೆ ವ್ಯಂಗ್ಯವಾಡಿದರು.
*ಪಿಎಸ್‌ಐ ಮರು ಪರೀಕ್ಷೆ ನಡೆಯನ್ನು ಸಮರ್ಥಿಸಿಕೊಂಡ ಸಿಟಿ ರವಿ.*
ಇನ್ನೂ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಪರೀಕ್ಷೆ ರದ್ದು ಪಡಿಸಿ ಮರು ಪರೀಕ್ಷೆ ನಡೆಸಲು ತೀರ್ಮಾನ ತೆಗೆದುಕೊಂಡಿರುವ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ ಅವರು, ಇದು ಉತ್ತಮವಾದ ನಿರ್ಧಾರ. ತನಿಖೆ ಕೋರ್ಟ್ ಅಂತೆಲ್ಲಾ ಹೋದರೆ ಸ್ಪರ್ದಾರ್ಥಿಗಳ ವಯಸ್ಸು ಮೀರುತ್ತದೆ. ಪಿಎಸ್‌ಐ ಪರೀಕ್ಅರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಡುಕೊಂಡೇ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಅಕ್ರಮ ನಡೆದ ಪಿಎಸ್‌ಐ ಪರೀಕ್ಷೆ ರದ್ದು ಮಾಡಿರುವುದು ಒಳ್ಳೆಯದು, ಇದರಲ್ಲಿ ನಕಲು ಮಾಡಿ ಪರೀಕ್ಷೆ ಬರೆದಂತ ಅಭ್ಯರ್ಥಿಗಳಿಗೆ ಇದು ತೊಂದರೆಯಾಗುತ್ತದೆ. ಕಷ್ಟಪಟ್ಟು ಓದಿದ ಅಭ್ಯರ್ಥಿಗಳಿಗೆ ಕೊಂಚ ತೊಂದರೆ ಆಗುತ್ತದೆ. ಆದರೆ ಇದಕ್ಕೆ ಬೇರೆ ದಾರಿ ಇಲ್ಲ, ಹಾಗಾಗಿ ಪರೀಕ್ಷೆ ರದ್ದು ಮಾಡಲಾಗಿದೆ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.