ಹುಬ್ಬಳ್ಳಿ : ಕನ್ನಡ-ಹಿಂದಿ ಟ್ವಿಟ್ ವಾರ್ ಸಿನಿಮಾ ನಟರು ಈ ರೀತಿ ಭಾಷೆಯ ವಿಚಾರಕ್ಕೆ ಹೋಗಬಾರದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾದ್ಯಮ ವರದಿಗಾರರೊಂದಿಗೆ ಮಾತನಾಡ ಅವರು ಸಿನಿಮಾ ಕ್ಷೇತ್ರಕ್ಕೆ ಯಾವುದೇ ಭಾಷೆ ಇಲ್ಲ. ಸಿನಿಮಾ ನಟರು ಈ ರೀತಿ ಟ್ವಿಟ್ ವಾರ್ ಮಾಡೋದು ಸಮಂಜಸವಲ್ಲ. ಸಿನಿಮಾ ಕ್ಷೇತ್ರಕ್ಕೆ ಅದರದೇ ಆದ್ ಭಾವನಾತ್ಮಕ ಸಂಬಂಧವಿದೆ. ಪ್ರತಿಯೊಬ್ಬರು ಎಲ್ಲ ಭಾಷೆ ಸಿನಿಮಾ ನೋಡುತ್ತಾರೆ. ಭಾಷೆ ಬಾರದವರು ಸಿನಿಮಾವನ್ನು ನೋಡುತ್ತಾರೆ. ಇಲ್ಲಿವರೆಗೆ ಸಿನಿಮಾದಲ್ಲಿ ರಂಗದಲ್ಲಿ ಭಾಷೆಗೆ ಸಂಬಂಧ ಸಂಘರ್ಷ ನಡೆದಿಲ್ಲ ಆದ್ದರಿಂದ ಅದಕ್ಕೆ ದಾರಿ ಮಾಡಿ ಕೊಡಬಾರದು ಎಂದರು.
