ಹುಬ್ಬಳ್ಳಿ : ಇಂದು ನಗರದ ವಾರ್ಡ್ ನಂ. 38ರ ಕೋಕಾಟಿಯವರ ಓಣಿಯ ರಸ್ತೆ ಅಭಿವೃದ್ಧಿ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ನಂತರ ವಾರ್ಡ್ ನಂ.52ರ ಕೋಟಿಲಿಂಗನಗರದ ಉದ್ಯಾನವನದಲ್ಲಿ ಹೈ ಮಾಸ್ಟ್ ಅಳವಡಿಸುವ ಕಾಮಗಾರಿ, ಸವಣೂರು ಲೇಔಟ್ ನಲ್ಲಿ ರೂ.15 ಲಕ್ಷ ವೆಚ್ಚದಲ್ಲಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಮತ್ತು ಮಯೂರಿ ಗಾರ್ಡನ್ ನಲ್ಲಿ ರೂ.4 ಲಕ್ಷ ಅನುದಾನದಲ್ಲಿ ಸಿಡಿ ನಿರ್ಮಾಣ ಹಾಗೂ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಅವರು ಚಾಲನೆ ನೀಡಿದರು.
ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ ಕಲಬುರಗಿ, ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ತಿಪ್ಪಣ್ಣಾ ಮಜ್ಜಗಿ, ಚೇತನ್ ಹಿರೇಕೆರೂರ, ಉಮೇಶಗೌಡ ಕೌಜಗೇರಿ, ಶಿವರುದ್ರಪ್ಪ ಬಡಿಗೇರ ಸೇರಿದಂತೆ ಇತರರು ಇದ್ದರು.