ಹುಬ್ಬಳ್ಳಿ : ಕೇಶ್ವಾಪುರ ನಗರದಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ , ಗಟಾರು ದುರಸ್ತಿ ಕಾರ್ಯವನ್ನು ಮಾಡುವಂತೆ ಆಗ್ರಹಿಸಿ ಕೇಶ್ವಾಪುರ ನಿವಾಸಿಗಳು ರಸ್ತೆಯಲ್ಲಿ ರಂಗೋಲಿ ಬಿಡಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು .
ಕೇಶ್ವಾಪುರದ ಎರಡನೇ ಅಡ್ಡರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು . ವಯೋವೃದ್ಧರು , ಶಾಲಾ ಮಕ್ಕಳಿಗೆ ದಿನನಿತ್ಯ ಸಂಚರಿಸಲು ತೊಂದರೆಯಾಗುತ್ತಿದ್ದು ಕೂಡಲೇ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ರಸ್ತೆಯಲ್ಲಿ ರಂಗೋಲಿ ಬಿಡಿಸುವ ಮೂಲಕ ಕೇಶ್ವಾಪುರ ನಿವಾಸಿಗಳು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ನಂತರ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕೇಶ್ವಾಪುರ ನಗರ ನಿವಾಸಿ ತೇಜರಾಜ್ ಜೈನ್. ರಸ್ತೆ ಹಾಗೂ ಗಟಾರ ನಿರ್ಮಾಣ ಮಾಡುವಂತೆ ಶಾಸಕರಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ . ಆದ್ದರಿಂದ ಇಂದು ನಗರದಲ್ಲಿ ಗುಂಡಿ ಬಿದ್ದ ರಸ್ತೆಯಲ್ಲಿ ರಂಗೋಲಿ ಬಿಡಿಸುವ ಮೂಲಕ ಪ್ರತಿಭಟನೆ ಮಾಡಿದ್ದೇವೆ . ಇನ್ನಾದರೂ ಶಾಸಕರು ಎಚ್ಚೆತ್ತುಕೊಂಡು ಕೂಡಲೇ ರಸ್ತೆ ದುರಸ್ತಿ ಕಾಮಗಾರಿಯನ್ನು ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು .
ಪ್ರತಿಭಟನೆಯಲ್ಲಿ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಕಾಂಗ್ರೆಸ್ ಮುಖಂಡರಾದ ಸಂತೋಷ ಚಲವಾದಿ, ಹೂವಪ್ಪ ದಾಯಿಗೋಡಿ, ಸ್ಥಳೀಯ ನಿವಾಸಿಗಳು ತೇಜರಾಜ್ ಜೈನ್, ಪ್ರೀತೇಶ ಪಾಲ್ಗೋಟ, ಸುರೇಶ ಗಾಂಧಿಮೂತ, ಅಶೋಕ ನರಗುಂದ ಭಾಗಿಯಾಗಿದ್ದರು