ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಗಲಭೆ ನಡೆದ ಸ್ಥಳಕ್ಕೆ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಳೇ ಹುಬ್ಬಳ್ಳಿ ದಿಡ್ಡಿ ಓಣಿ ಶ್ರೀ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆದು. ಗಲಾಟೆಯಲ್ಲಿ ಕಿಡಿಗೇಡಿಗಳು ವಡೆದ ದೇವಸ್ಥಾನದ ಕಿಡಕಿ ಗ್ಲಾಸ್ ಪರಿಶೀಲಿಸಿ ಗಲಾಟೆ ಕುರಿತು ದೇವಸ್ಥಾನ ಮುಖ್ಯಸ್ಥರಿಂದ ಮಾಹಿತಿ ಪಡೆದರು. ಹಾಗೂ ಗಲಾಟೆಯಲ್ಲಿ ಹಾನಿಗೆ ವಳಗಾದ ಮನೆಗಳಿಗೆ ಭೇಟಿ ನೀಡಿ ಗಲಭೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ರಾಜ್ಯ ಪ್ರದಾನಕಾರ್ಯದರ್ಶಿ ಮಹೇಶ್ ತೆಂಗಿಕಾಯಿ, ಸಂಜಯ ಕಪಟಕರ , ಅಶೋಕ್ ಕಾಟವೇ , ರವಿ ನಾಯಕ ಉಪಸ್ಥಿತರಿದ್ದರು.