ಹುಬ್ಬಳ್ಳಿ : ಅಗತ್ಯ ವಸ್ತುಗಳ ಖರೀದಿಗೆ ಎ.ಟಿಎಮ್ ಗೆ ಹಣ ತರಲು ಹೋದ ಯುವಕನಿಗೆ, ಹಳೇಹುಬ್ಬಳ್ಳಿ ಪಿಎಸ್ ಐ ಲಾಠಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಯುವಕನ ಕುಟುಂಬಸ್ಥರು ಗಂಭೀರವಾಗಿ ಆರೋಪ ಮಾಡಿದ್ದಾರೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸುಖಾನಂದ ಶಿಂಧೆ ಹಳೆ ಹುಬ್ಬಳ್ಳಿ ನಿವಾಸಿ ರೆಹಮುತ್ ಕಾರತಗರ ಎಂಬಾತನಿಗೆ ಬೈಕ್ ನಿಲ್ಲಿಸಲಿಲ್ಲಾ ಎಂದು, ಲಾಠಿಯಿಂದ ಹಿಗ್ಗಾ ಮುಗ್ಗಾ ಥಳಿಸಿದ ಪರಿಣಾಮ, ಯುವಕ ತೀವ್ರವಾದ ರಕ್ತಸ್ರಾವವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಸಂಬಂಧಿಕರು ಪಿಎಸ್‌ಐ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.