ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕೋಮುಗಲಭೆ ಸೃಷ್ಟಿಸುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಯುವಕ ಅಭಿಷೇಕ ಹಿರೇಮಠ ಎಂಬುವವನನ್ನು ಹುಬ್ಬಳ್ಳಿಯ ನಾಲ್ಕನೆಯ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಏಪ್ರಿಲ್ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಅಭಿಷೇಕ ಹಿರೇಮಠ ಪರ ವಕೀಲರಾದ ಸಂಜೀವ ಬಡಾಸ್ಕರ, ಅಭಿಷೇಕ ಹಿರೇಮಠ ಪರವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದು ವಕೀಲರ ಸಂಘಟನೆಯು ವಕಾಲತ್ತು ಸಲ್ಲಿಸಿದ್ದೇವೆ. ಈ ಕುರಿತು ಹುಬ್ಬಳ್ಳಿ ನಾಲ್ಕನೆಯ ಜೆ.ಎಂ.ಎಫ್.ಸಿ ಹೆಚ್ಚುವರಿ ನ್ಯಾಯಾಲಯ ಏಪ್ರಿಲ್ 30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ ಎಂದರು.
ಇನ್ನೂ ನಾಳೆ ಪೊಲೀಸರ ಪರ ಹಾಗೂ ಸರ್ಕಾರದ ಪರ ತಕರಾರು ಸಲ್ಲಿಸಿದ ಬಳಿಕ ನಾವು ಅಭಿಷೇಕ ಹಿರೇಮಠ ಪರವಾಗಿ ಪ್ರಬಲವಾಗಿ ವಾದ ಮಂಡಿಸುತ್ತೇವೆ. ನಮ್ಮ ಜೊತೆಗೆ ದೊಡ್ಡಮಟ್ಟದ ವಕೀಲರ ತಂಡವಿದೆ. ನಮಗೆ ವಿಶ್ವಾಸವಿದೆ ಪ್ರಬಲವಾಗಿ ವಾದ ಮಂಡಿಸಿ ಜಾಮೀನು ಪಡೆಯುವ ವಿಶ್ವಾಸವಿದೆ ಎಂದರು.
ಇಂದು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದೇವೆ. ನಾಳೆ ಸರ್ಕಾರದ ಪರ ತಕರಾರು ಸಲ್ಲಿಸಿದ ಮೇಲೆ ನಾವು ವಾದ ಮಂಡಿಸುತ್ತೇವೆ. ಅಲ್ಲದೇ ಅಭಿಷೇಕ ಹಿರೇಮಠ ಪಿಯುಸಿ ವಿದ್ಯಾರ್ಥಿಯಾಗಿದ್ದು, ನ್ಯಾಯಾಲಯದ ಪರವಾನಗೆ ಪಡೆದು ಪರೀಕ್ಷೆ ಬರೆಯಲು ಅವಕಾಶವನ್ನು ಪಡೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.
Hubli News Latest Kannada News