ಹುಬ್ಬಳ್ಳಿ : ಹನುಮ ಜಯಂತಿ ದಿನದಂದೇ ಆಂಜನೇಯ ಕಣ್ಣೀರು ಹಾಕಿದ ಘಟನೆ ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ನಡೆದಿದೆ.
ಹೌದು.. ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ಇತಿಹಾಸ ಹೊಂದಿರುವ ಪ್ರಸಿದ್ಧ ಪ್ರಾಣ ಹನುಮ ದೇವಸ್ಥಾನದಲ್ಲಿನ ಹನುಮಂತನ ಕಣ್ಣಿನಿಂದ ನೀರು ಬರುತ್ತಿರುವುದು ಈಗ ಅಚ್ಚರಿ ಮೂಡಿಸಿದೆ. ಸದ್ಯ ಇಡೀ ಗ್ರಾಮಕ್ಕೆ ಗ್ರಾಮವೇ ಚಕಿತ ಗೊಂಡಿದ್ದು, ಹನುಮನ ಮೂರ್ತಿಯಿಂದ ಕಣ್ಣೀರು ಜಿನಿಗುತ್ತಿರೋದಕ್ಕೆ ಎಲ್ಲಾ ಗ್ರಾಮಸ್ಥರು ಬಹಳ ಆಶ್ಚರ್ಯದಿಂದ ದೇವಸ್ಥಾನದತ್ತ ಮುಖಮಾಡಿದ್ದಾರೆ.
ಇನ್ನು, ಈ ಆಂಜನೇಯ ದೇವಸ್ಥಾನ ಸುಮಾರು 700 ವರ್ಷಗಳ ಇತಿಹಾಸ ಹೊಂದಿದ್ದು, ಜಕಣಾಚಾರಿ ಗುಡಿಯನ್ನು ಕಟ್ಟಿದ್ದಾರೆಂಬ ನಂಬಿಕೆ ಗ್ರಾಮಸ್ಥರಾಗಿದೆ. ಪ್ರತಿವರ್ಷ ಹನುಮ ಜಯಂತಿ ದಿನದಂದು ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸುತ್ತಾ ಬರಲಾಗುತ್ತಿತ್ತು. ಅದರಂತೆ ಈ ವರ್ಷವು ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಲಾಗಿತು. ನಂತರ ಆಂಜನೇಯನಿಗೆ ಮಂಗಳಾರತಿ ಮಾಡುವ ಸಮಯದಲ್ಲಿ ಕಣ್ಣೀಂದ ನೀರು ಜಿಗುಗಲು ಶುರುವಾಗಿದೆ. ಇದನ್ನು ಕಂಡ ಅರ್ಚಕ ಆಶ್ಚರ್ಯಗೊಂಡು ಸ್ಥಳೀಯ ಗ್ರಾಮಸ್ಥರಿಗೆ ತಿಳಿಸಿದ್ದಾನೆ. ಆ ಬಳಿಕ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ಡುತ್ತಿದೆ.ಅದೇನಿ ಇರಲಿ ರಾಜ್ಯಾದ್ಯಂತ ಎಲ್ಲರೂ ಹನುಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಈ ವೇಳೆ ಬುಡರಸಿಂಗಿ ಹನುಮ ಕಣ್ಣೀರು ಹಾಕಿದ್ದು ಮಾತ್ರ ಭಕ್ತರಲ್ಲಿ ಆತಂಕ ಮೂಡಿಸಿದೆ.