ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ವಿವಿಧ ತಾಲೂಕಿನ 20 ಗ್ರಾಮಗಳಲ್ಲಿ ಕೋವಿಡ್ ರೋಗಿಗಳಿಗಾಗಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮನೆಯಲ್ಲಿ ಪ್ರತ್ಯೇಕವಾಸದಲ್ಲಿ ಇದ್ದು ಆರೈಕೆ ಮಾಡಿಕೊಳ್ಳಾಗದ ಸೋಂಕಿತರನ್ನು ಗುರುತಿಸಿ, ಕಾಳಜಿ ಕೇಂದ್ರಗಳಿಗೆ ಕರೆ ತರಲಾಗುತ್ತಿದೆ. ಸೂಕ್ತ ವೈದ್ಯಕೀಯ ಚಿಕಿತ್ಸೆಯೊಂದಿಗೆ ಪೌಷ್ಟಿಕ ಆಹಾರವನ್ನು ನೀಡಲಾಗುವುದು. ಕಾಳಜಿ ಕೇಂದ್ರಗಳ ನಿರ್ವಹಣೆಗಾಗಿ 8 ಲಕ್ಷ ಹಣವನ್ನು ತಹಶೀಲ್ದಾರ್‌ಗಳಿಗೆ ನೀಡಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.
ಹುಬ್ಬಳ್ಳಿ ಸರ್ಕ್ಯೂಟ್ ಹೌಸ್‌ನಲ್ಲಿ ಇಂದು ಬೆಂಗಳೂರು ಮೂಲದ ಈ ಓ (ಎನ್ಟ್ರಪ್ರೋನರ್ ಆರ್ಗನೈಸೇಶನ್) ಸಂಸ್ಥೆ ವತಿಯಿಂದ ನೀಡಲಾದ 250 ಜೊತೆ ರಟ್ಟಿನ ಮಂಚ, ಗಾದಿ, ತಲೆದಿಂಬು, 10 ಆಕ್ಸಿಜನ್ ಸಾಂದ್ರಕಗಳು ಹಾಗೂ ಇಂಡಿ ವಿಲೇಜ್ ಫೌಂಡೇಶನ್‌ನಿಂದ ನಿಯೋಜಿಸಲಾದ 3 ಆಂಬ್ಯಲೆನ್ಸ್‌ಗಳನ್ನು ತಾಲೂಕು ಆ್ಪತ್ರೆಗಳಿಗೆ ನೀಡುವ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೋವಿಡ್ ಕಾಳಜಿ ಕೇಂದ್ರಗಳಲ್ಲಿ ವಾರದಲ್ಲಿ ನೀಡುವ ಆಹಾರದ ಮೆನು ಸಹ ಸಿದ್ದಪಡಿಸಲಾಗಿದೆ. ಹಳ್ಳಿಗಳಲ್ಲಿ ಜನರ ಮನ ಓಲಿಸಿ ಕಾಳಜಿ ಕೇಂದ್ರಕ್ಕೆ ಕೋವಿಡ್ ಸೋಂಕಿತರನ್ನು ಸ್ಥಳಾಂತರಿಸಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ರೋಗಿಗಳ ತಪಾಸಣೆ ನಡೆಸುವರು. ಕಿಮ್ಸ್ ಹಾಗೂ ಎಸ್.ಡಿ.ಎಂ.ನ ಹೆಚ್ಚುವರಿ ವೈದ್ಯರು ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಸಹ ಕಾಳಜಿ ಕೇಂದ್ರಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ವೈದ್ಯರ ನಡೆ ಹಳ್ಳಿಯ ಕಡೆ ಧ್ಯೇಯ ವಾಕ್ಯದೊಂದಿಗೆ ಜಿಲ್ಲೆಯ ಪತ್ರಿ ಗ್ರಾಮಗಳ ಮನೆ ಮನೆಗಳಿಗೆ ತೆರಳಿ ವೈದ್ಯಕೀಯ ತಪಾಸಣೆ ಹಾಗೂ ಸೂಕ್ತ ಚಿಕಿತ್ಸೆ ನೀಡಲು ಸಿದ್ದತೆ ನೆಡಸಲಾಗಿದೆ. ಇದರೊಂದಿಗೆ ಔಷಧ ಕಿಟ್ ವಿತರಣೆ ಮಾಡಲಾಗುವುದು.
*ಜಿಲ್ಲೆಯಲ್ಲಿ ಇಳಿಮುಖ ಹಾದಿಗೆ ಕೋವಿಡ್*
ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳ ಶೇಕಡವಾರು ಪ್ರಮಾಣ 35 ರಿಂದ 23 ಕ್ಕೆ ಇಳಿಮುಖವಾಗಿದೆ. ಹುಬ್ಬಳ್ಳಿ ಧಾರವಾಡ ನಗರದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಕಡಿಮೆಯಾಗಿದೆ. ಕಠಿಣ ಲಾಕ್ ಡೌನ್ ಜಾರಿಯಿಂದ ಕೋವಿಡ್ ನಿಯಂತ್ರಣದ ಹಾದಿಗೆ ಮರಳುತ್ತಿದೆ. ಜಿಲ್ಲೆಯಲ್ಲಿ 7 ಸಾವಿರ ಸಕ್ರಿಯ ಪ್ರಕರಣಗಳಿವೆ. ಇವುಗಳಲ್ಲಿ ಶೇ.20 ರಷ್ಟು ಪ್ರಕರಣಗಳು ಗ್ರಾಮೀಣ ಭಾಗದಲ್ಲಿವೆ. ಪ್ರತಿದಿನ ಜಿಲ್ಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಕೋವಿಡ್-19 ಟೆಸ್ಟ್ ಮಾಡಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚು ಮಾಡಿ ಪ್ರತಿದಿನ 24 ಗಂಟೆಗಳಲ್ಲಿ ವರದಿ ನೀಡಲಾಗುತ್ತಿದೆ. ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 950 ಕೋವಿಡ್ ರೋಗಿಗಳ ಪ್ರಮಾಣ 850 ಕ್ಕೆ ಇಳಿದಿದೆ. ಜಿಲ್ಲಾಡಳಿತದಿಂದ ಹುಬ್ಬಳ್ಳಿ ಧಾರವಾಡ ಆಸ್ಪತ್ರೆಗಳಲ್ಲಿ 2400 ದಾಖಲಾಗಿದ್ದರು. ಈಗ 2050 ಈ ಪ್ರಮಾಣ ಇಳಿಕೆಯಾಗಿದೆ. ಕೋವಿಡ್ ರೋಗಿಗಳ ದಾಖಲಾಗುವಿಕೆ ಪ್ರಮಾಣವು ಕಡಿಮೆಯಾಗಿದೆ. ಎಲ್ಲಾ ಆಸ್ಪತ್ರೆ ಬಡ್‌ಗಳು ಲಭ್ಯವಿವೆ. ಮುಂದಿನ ದಿನಗಳ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿ ಬೆಡ್‌ಗಳ ಸಂಖ್ಯೆ ಜಾಸ್ತಿಯಾಗಲಿದೆ.
*ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಕಾರ್ಯ ನಿರ್ವಹಣೆ*
ಕುಂದಗೋಳ ನವಲಗುಂದ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್‌ಗಳು ಮೂರುವಾರಗಳಿಂದ ಕಾರ್ಯನಿರ್ವಹಿಸುತ್ತಿವೆ. ಕಲಘಟಗಿ ಆಸ್ಪತ್ರೆಗೆ ಕಿಮ್ಸ್‌ನಿಂದ ವೆಂಟಿಲೇಟರ್ ನಿರ್ವಾಹಕರ ನೇಮಿಸಿದ್ದು, ಅಲ್ಲಿಯೂ ಸಹ ವೆಂಟಿಲೇಟರ್ ಕಾರ್ಯನಿರ್ವಹಿಸುತ್ತಿವೆ. ತಾಲೂಕು ಆಸ್ಪತ್ರೆಗಳಿಗೆ ಆಕ್ಸಿಜನ್ ಕೊರತೆಯಾಗದಂತೆ ಡ್ಯೂರಾ ಸಿಲಿಂಡರ್‌ಗಳನ್ನು ನೀಡಲಾಗಿದೆ. ಈ ಮೊದಲು ತಾಲೂಕು ಆಸ್ಪತ್ರೆಗಳಲ್ಲಿ 20 ಆಕ್ಸಿಜನ್ ಸಿಲಿಂಡರ್‌ಗಳಿದ್ದವು. ಜಿಲ್ಲಾಡಳಿತದಿಂದ 50 ಸಿಲೆಂಡರ್‌ಗಳನ್ನು ನೀಡಲಾಗಿದೆ. ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 70 ಕ್ಕೂ ಆಕ್ಸಿಜನ್ ಸಿಲೆಂಡರ್‌ಗಳಿವೆ. 10 ಟನ್ ಹೆಚ್ಚುವರಿ ಆಕ್ಸಿಜನ್ ಸಂಗ್ರಹ ಮಾಡಲಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಧಾರವಾಡದಲ್ಲಿ ಹೆಚ್ಚಿನ ಆಕ್ಸಿಜನ್ ಸಂಗ್ರಹ ಸಾಮರ್ಥ್ಯವಿದೆ. ಹುಬ್ಬಳ್ಳಿ ಕಿಮ್ಸ್‌ನಲ್ಲಿ 40 ಟನ್ ಆಕ್ಸಿಜನ್ ಸಂಗ್ರಹ ಘಟಕವಿದೆ. ಪ್ರತಿದಿನ 40 ಟನ್ ಆಕ್ಸಿಜನ್ ಜಿಲ್ಲೆಗೆ ಸರಬರಾಜು ಆಗುತ್ತಿದೆ. ಕುವೈತ್ ರಾಷ್ಟ್ರದಿಂದಲೂ ಜಿಲ್ಲೆಗೆ ಆಕ್ಸಿಜನ್ ಆಗಮಿಸಿದೆ. ಮಧ್ಯ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದಲೂ ಆಕ್ಸಿಜನ್ ತರಿಸಿ ಸಂಗ್ರಹ ಮಾಡಿ ಇಟ್ಟುಕೊಳ್ಳಲಾಗಿದೆ.
*100 ಲಿಪೊಸೊಮಲ್ ಅ್ಯಂಫೋಟೆರಿಸನ್ ಬಿ ವೈಲ್ ಖರೀದಿ*
ಆ್ಯಂಟಿ ಬ್ಲಾಕ್ ಫಂಗಲ್ ಔಷಧವಾದ ಲಿಪೊಸೊಮಲ್ ಅ್ಯಂಫೋಟೆರಿಸನ್ ಬಿ ಔಷಧಕ್ಕೆ ಹೆಚ್ಚಿನ ಬೇಡಿಕೆ ಇದೆ. ಕಿಮ್ಸ್‌ನಲ್ಲಿ 96 ಬ್ಲಾಕ್ ಫಂಗಸ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಧಾರವಾಡ ಜಿಲ್ಲೆಯ 23 ರೋಗಿಗಳಿದ್ದಾರೆ. 20 ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ರಾಜ್ಯ ಸರ್ಕಾರ ಲಭ್ಯ ಇರುವ ಅ್ಯಂಫೋಟೆರಿಸನ್ ಬಿ ನಲ್ಲಿ ಹೆಚ್ಚು ವೈಲ್‌ಗಳನ್ನು ಧಾರವಾಡ ಜಿಲ್ಲೆಗೆ ನೀಡಿದೆ. ಕಿಮ್ಸ್‌ನಲ್ಲಿ ಬೇರ ಜಿಲ್ಲೆಯ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವುದರಿಂದ ಹೆಚ್ಚುವರಿ ವೈಲ್‌ಗಳನ್ನು ಜಿಲ್ಲೆಗೆ ಕಳುಹಿಸಲು ಸರ್ಕಾರದಿಂದ ಕ್ರಮ ಕೈಗೊಳ್ಳಾಗಿದೆ. ಸರ್ಕಾರ ನೀಡುವ ವೈಲ್‌ಗಳ ಹೊರತಾಗಿ ಕಿಮ್ಸ್ ಅನುದಾನದಲ್ಲಿ 100 ಲಿಪೊಸೊಮಲ್ ಅ್ಯಂಫೋಟೆರಿಸನ್ ಬಿ ವೈಲ್ ಖರೀದಿಸಲಾಗುತ್ತಿದೆ. ಉತ್ಪಾದನೆ ಹಾಗೂ ಬೇಡಿಕೆ ನಡುವಿನ ವ್ಯತ್ಯಾಸದಿಂದಾಗಿ ಅ್ಯಂಫೋಟೆರಿಸನ್ ಬಿ ಕೊರತೆ ಉಂಟಾಗಿದೆ. ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ರೆಮಿಡಿಸಿವರ್ ಸಂಗ್ರಹವಿದೆ. ಮುಂದೆ ಅ್ಯಂಫೋಟೆರಿಸನ್ ಬಿ ಕೊರತೆ ಸಹ ನೀಗಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
*63 ಕೋವಿಡ್ ಸೋಂಕಿತರು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ*
ಗ್ರಾಮೀಣ ಭಾಗದಲ್ಲಿ ಜನರ ಮನ ಒಲಿಸಿ ಕೋವಿಡ್ ಸೋಂಕಿತರನ್ನು ಕಾಳಜಿ ಕೇಂದ್ರಕ್ಕೆ ತರಲಾಗುತ್ತಿದೆ. ಒಟ್ಟು 63 ಕೋವಿಡ್ ಸೋಂಕಿತರು ಕಾಳಜಿ ಕೇಂದ್ರಕ್ಕೆ ಸ್ಥಳಾಂತರವಾಗಿದ್ದಾರೆ. ಸದ್ಯ ಹುಬ್ಬಳ್ಳಿ ತಾಲೂಕಿನ ನೂಲ್ವಿ 12, ಕೋಳಿವಾಡ 12, ಬ್ಯಾಹಟ್ಟಿ 5, ಕುಸಗಲ್ 5, ಅಂಚಟಗೇರಿ 6, ಕಲಘಟಗಿ ತಾಲೂಕಿನ ಮುಕ್ಕಲ ಗ್ರಾಮದಲ್ಲಿ 6, ದೇವಲಿಂಗಿಕೊಪ್ಪ 6, ತಾವರೆಕೆರೆ 4, ಬಮ್ಮಿ ಗಟ್ಟಿ 2, ಕುಂದಗೋಳ ತಾಲೂಕಿನ ಕುಬಿಯಾಳ 5 , ಯಳಿವಾಳ 7 , ಬೆಟ್ಟದೂರು 1, ಅಣ್ಣಿಗೇರಿ ನಾವಳ್ಳಿಯಲ್ಲಿ 7 ಸೋಂಕಿತರನ್ನು ಕಾಳಜಿ ಕೇಂದ್ರಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಗಳ ಕಾರ್ಯಪಡೆಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಗ್ರಾಮಗಳಲ್ಲಿ ಸ್ವಯಂ ಲಾಕ್‌ಡೌನ್ ಪಾಲಿಸಲಾಗುತ್ತಿದೆ ಎಂದು ಜಿ.ಪಂ.ಸಿಇಓ ಡಾ.ಬಿ ಸುಶೀಲ ಹೇಳಿದರು.
*250 ಬೆಡ್, ಆಕ್ಸಿಜನ್ ಸಾಂದ್ರಕ ಹಾಗೂ ಆಬ್ಯುಂಲೆನ್ಸ್ ಹಸ್ತಾಂತರ*
ಶಾಸಕ ಅರವಿಂದ ಬೆಲ್ಲದ ಅವರ ಕೋರಿಕೆ ಮೇರೆಗೆ ಬೆಂಗಳೂರು ಮೂಲದ ಈ ಓ (ಎನ್ಟ್ರಪ್ರೋನರ್ ಆರ್ಗನೈಸೇಶನ್) ಸಂಸ್ಥೆ 250 ಜೊತೆ ರಟ್ಟಿನ ಮಂಚ, ಗಾದಿ, ತಲೆದಿಂಬು, 10 ಆಕ್ಸಿಜನ್ ಸಾಂದ್ರಕಗಳನ್ನು ಜಿಲ್ಲಾಡಳಿತಕ್ಕೆ ನೀಡಿದೆ. ಈ ಮೊದಲು ಸಂಸ್ಥೆ 50 ಆಕ್ಸಿಜನ್ ಸಾಂದ್ರಕಗಳನ್ನು ನೀಡಿತ್ತು. ಇವುಗಳನ್ನು ಕುಂದಗೋಳ, ನವಲಗುಂದ ಹಾಗೂ ಕಲಘಟಗಿ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಅಗತ್ಯ ಅನುಸಾರ ಹಂಚಿಕೆ ಮಾಡಿದರು.
ಇಂಡಿ ವಿಲೇಜ್ ಫೌಂಡೇಶನ್‌ನಿಂದ ನಿಯೋಜಿಸಲಾದ 3 ಆಂಬ್ಯಲೆನ್ಸ್‌ಗಳನ್ನು ಸಹ ಇದೇ ತಾಲೂಕು ಆ್ಪತ್ರೆಗಳಿಗೆ ನಿಯೋಜಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಶಶಿಧರ ಮಾಡ್ಯಾಳ, ಪ್ರಕಾಶ್ ನಾಶಿ ಹುಬ್ಬಳ್ಳಿ ತಾ.ಪಂ.ಇ ಓ ಗಂಗಾಧರ ಕಂದಕೂರ, ಇಂಡಿ ವಿಲೇಜ್ ಫೌಂಡೇಶನ್‌ನ
ಮಹೇದವ್, ಶಿವು ಸಂದೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.