ಧಾರವಾಡ್ : ಧಾರವಾಡ ನುಗ್ಗಿಕೇರಿ ಶ್ರೀ ಹನುಮಾನ ದೇವಸ್ಥಾನ ಆವರಣದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರಿಂದ ದೌರ್ಜನ್ಯಕ್ಕೆ ಒಳಗಾದ ಕಲ್ಲಂಗಡಿ ವ್ಯಾಪಾರಸ್ಥ ನಬಿಸಾಬ ಕಿಲ್ಲೆದಾರ್ ಅವರಿಗೆ ಇಂದು ಧಾರವಾಡ ರಾಜೀವ ಗಾಂಧಿ ನಗರದಲ್ಲಿ ಹಿಂದೂ ಮುಸ್ಲಿಂ ಧರ್ಮಗುರು ಸೇರಿ ಕಲ್ಲಂಗಡಿ ಹಣ್ಣನ್ನು ನೀಡಿ ಧೈರ್ಯವನ್ನು ಹೇಳಿದರು.
ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡರು ಅಶ್ಪಾಕ್ ಕುಮಟಾಕರ್ ಸುಮಾರು 15 ವರ್ಷಗಳಿಂದ ಧಾರವಾಡ್ ನುಗ್ಗಿಕೆರಿ ಶ್ರೀ ಹನುಮಂತ ದೇವಸ್ಥಾನ ಆವರಣದಲ್ಲಿ ವ್ಯಾಪಾರ ಮಾಡುತ್ತಿದ್ದ ನಬಿಸಾಬ ಕಿಲ್ಲೆದಾರ ಅವರ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರು ದೌರ್ಜನ್ಯವನ್ನು ಮಾಡಿ ಅವರ ಅಂಗಡಿಯಲ್ಲಿದ ಕಲ್ಲಂಗಡಿ ಹಣ್ಣುನ್ನು ನಡು ರಸ್ತೆಯಲ್ಲಿ ಒಡೆದ ದುಷ್ಕರ್ಮಿಗಳ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸಿ ಮುಂದೆ ಇಂತಹ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಜಗದ್ಗುರು ಚಂದ್ರಶೇಖರ್ ಮಹಾಸ್ವಾಮಿಜಿ ಹೊಸಮಠ ಹುಬ್ಬಳ್ಳಿ, ಮುಸ್ಲಿಂ ಧರ್ಮ ಗುರುಗಳು ಮೌಲಾನಾ ಹಜರತ್ ಸಯ್ಯದ್ ಅಹ್ಮದ್ ರಜಾ, ಹಜರತ್ ಸಯ್ಯದ್ ನಿಸಾರ್ ಅಹ್ಮದ್ ಚಗನ್,
ಹಜರತ್ ಸಯ್ಯದ್ ಅನ್ಸರ್ ಅಹ್ಮದ್, ಅನ್ಸರ್ ಅಹ್ಮದ್ ಮುಕ್ತಿ , ಕಾಂಗ್ರೆಸ್ ಮುಖಂಡರು ಅಶ್ಪಾಕ್ ಕುಮಟಾಕರ್, ಶ್ರೀನಿವಾಸ್ ಕ್ಯಾರಕಟ್ಟಿ ,ಆಶಾಮ್ ರಾಮದುರ್ಗ, ಹಾಗೂ ರಾಜೀವ ಗಾಂಧಿ ನಗರದ ನಿವಾಸಿಗಳು ಉಪಸ್ಥಿತರಿದ್ದರು.