Home / Top News / ಡಾ. ಬಾಬು ಜಗಜೀವನರಾಮ್ ಅವರ ಭವನ ಲೋಕಾರ್ಪಣೆಗೊಂಡರೇ ಅದರ ಶ್ರೇಯಸ್ಸು ಅಬ್ಬಯ್ಯಯವರಿಗೆ ಸಲ್ಲುತ್ತದೆ : ಉಳ್ಳಿಕಾಶಿ

ಡಾ. ಬಾಬು ಜಗಜೀವನರಾಮ್ ಅವರ ಭವನ ಲೋಕಾರ್ಪಣೆಗೊಂಡರೇ ಅದರ ಶ್ರೇಯಸ್ಸು ಅಬ್ಬಯ್ಯಯವರಿಗೆ ಸಲ್ಲುತ್ತದೆ : ಉಳ್ಳಿಕಾಶಿ

Spread the love

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮುಂದಿನ ದಿನಗಳಲ್ಲಿ ಹಸಿರು ಕ್ರಾಂತಿಯ ಹರಿಕಾರ, ಡಾ. ಬಾಬು ಜಗಜೀವನರಾಮ್ ಅವರ ಭವನ ನಿರ್ಮಾಣ ಪೂರ್ಣವಾಗುವ ಖಚಿತತೆಯ ಹಿನ್ನೆಲೆಯಲ್ಲಿ ರಾಜಕೀಯ ದುರುದ್ದೇಶದಿಂದ ಅನ್ಯರು ಪೂರ್ವ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರು ಸಮುದಾಯವೊಂದಕ್ಕೆ ಅನ್ಯಾಯ ಮಾಡುತ್ತಿರುವುದಾಗಿ ಸುಳ್ಳು ಹೇಳಿದ್ದು, ಸಮುದಾಯದಕ್ಕೆ ಅನ್ಯಾಯ ಮಾಡುವುದು ತಪ್ಪು ಹಾಗೂ ಖಂಡನೀಯವಾಗಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಡಾ. ಬಾಬುಜೀ ಅವರ ಭವನ ಲೋಕಾರ್ಪಣೆಗೊಂಡರೆ ಅದರ ನಿಜವಾದ ಶ್ರೇಯಸ್ಸು ಅಬ್ಬಯ್ಯ ಅವರಿಗೆ ಸಲ್ಲತ್ತದೆ ಎಂದು ಸಮತಾಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಸ್ಪಷ್ಟ ಪಡಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಪಡದಯ್ಯನ ಹಕ್ಕಲದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ ಬೃಹತ್ ಭವನ ನಿರ್ಮಾಣಕ್ಕೆ ಸರ್ಕಾರದ ದಲಿತ ವಿರೋಧಿ ಕಾರಣದಿಂದಾಗಿರುವ ವಿಳಂಬವನ್ನು ಅನ್ಯರು ರಾಜಕೀಯವಾಗಿ ಬಳಸುವುದಕ್ಕೆ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ತೀವ್ರವಾಗಿ ಖಂಡಿಸುತ್ತದೆ. ಸಮತಾಸೇನಾ ಸಂಘಟನೆಯ ಮೂಲಕ ಹು-ಧಾ ದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನ ಮತ್ತು ಡಾ. ಬಾಬು ಜಗಜೀವನ್ ರಾಮ್ ಅವರ ಭವನವನ್ನು ಬೆಂಗಳೂರು ಮಾದರಿಯ ಹವಾನಿಯಂತ್ರಿತ ಭವ್ಯ ಭವನಗಳ ನಿರ್ಮಾಣಕ್ಕಾಗಿ ಸರ್ಕಾರ, ಜಿಲ್ಲಾಡಳಿತ ಹಾಗೂ ಪಾಲಿಕೆಗೆ ನಿರಂತರವಾಗಿ ಆಗ್ರಹಿಸಿ ಹೋರಾಟ ಪಾಲಿಕೆಗೆ ತನ್ನ ಪಾಲಿನ ವಂತಿಗೆ ಮತ್ತು ಸ್ಥಳೀಯ ಸಂಸ್ಥೆಯ ಜಾಗ ಸಹಿತ ನೀಡುವಂತಾದಲ್ಲಿ ಭವನ ನಿರ್ಮಿಸಲು ಕ್ರಮ ವಹಿಸಲಾಗುವ ಕೋರಿಕೆಯನ್ನು ಸಲ್ಲಿಸಿತು. ಆಗ ಪಾಲಿಕೆಯಿಂದ ಧಾರವಾಡದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭವನಕ್ಕೆ ಹಾಗೂ ಬಾಬು ಜಗಜೀವನ್ ರಾಮ್ ಅವರ ಭವನ ನಿರ್ಮಾಣಕ್ಕೆ ತಲಾ ೨೫,೦೦೦೦೦ ಲಕ್ಷ ವನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡಲಾಯಿತು. ಭವನ ನಿರ್ಮಾಣಕ್ಕೆ ಸಂಬಂಧಿಸಿದ ಯಾವುದೇ ಬೆಳವಣಿಗೆ ಹುಬ್ಬಳ್ಳಿಯಲ್ಲಿ ಚಾಲನೆ ಸಿಗಲಿಲ್ಲ ಎಂದರು.

ಧಾರವಾಡದ ಅಂಬೇಡ್ಕರ್ ಭವನ ಹಾಗೂ ಭವನಗಳ ಕೆಲಸ ನೆನಗುದಿಗೆ ಬಿದ್ದಾಗ ಹಲವಾರು ಸಭೆಗಳಲ್ಲಿ ಒತ್ತಾಯಿಸಿದಾಗ ಅಂದಿನ ಸಮಾಜ ಕಲ್ಯಾಣ ಮಂತ್ರಿ ಗೋವಿಂದ್ ಕಾರಜೋಳ ಹಾಗೂ ಅಂದಿನ ಶಾಸಕರಾದ ವೀರಭದ್ರಪ್ಪ ಹಾಲಹರವಿ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಆದರೇ ನಿರ್ಮಾಣಕ್ಕೆ ಯಾವುದೇ ಆದೇಶ ಹಣ ಬಿಡುಗಡೆಯನ್ನು ಮಾಡದೇ ಪಾಲಿಕೆ ನೀಡಿದ ಜಾಗೆಯಲ್ಲಿ ಹಣ ಬಿಡುಗಡೆ ಮಾಡಿ ಪ್ರಚಾರ ಪಡೆದು ಭವನ ನಿರ್ಮಾಣ ಮಾಡದೇ ಕೇವಲ ಕಂಪೌಂಡ ನಿರ್ಮಿಸಿ ವಂಚಿಸಲಾಯಿತು ಎಂದು ದೂರಿದರು.

ಶಾಸಕರಾದ ಪ್ರಸಾದ್ ಅಬ್ಬಯ್ಯ ಆವರು ಡಾ. ಬಾಬು ಜಗಜೀವನರಾಮ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧುನಿಕ ಮತ್ತು ಭವ್ಯತೆಗೆ- ಸುಸಜ್ಜಿತಗೆ ಒತ್ತು ನೀಡುವ ಬಗ್ಗೆ ಸಿ.ಎಲ್.ಪಿ ಸಭೆಯಲ್ಲಿ ಮುಖ್ಯಮಂತ್ರಿಗಳ ಎದುರು ಭವನ ನಿರ್ಮಾಣಕ್ಕೆ ೧೦ ಕೋಟಿಯದರೊಂದಿಗೆ ಕಾಮಗಾರಿ ಆರಂಭಿಸಲಾಯಿತು.ಆದರೆ ಸರ್ಕಾರ ಬದಲಾದ ನಂತರ ಕಾಮಗಾರಿ ಸ್ಥಗಿತಗೊಂಡಿತು. ಪ್ರಸಾದ್ ಅಬ್ಬಯ್ಯ ಅವರು ಸರ್ಕಾರದೊಂದಿಗೆ – ಮಂತ್ರಿಗಳೊಂದಿಗೆ, ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಬಾಬುಜೀ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ೨ ತಿಂಗಳ ಹಿಂದೆ ಸರ್ಕಾರ ಆದೇಶ ಹೊರಡಿಸಲು ಯಶಸ್ವಿಯಾಯಿತು. ಬಾಕಿ ಹಣ ಬಿಡುಗಡೆ ಮತ್ತೂ ಭವನದ ಕಾಮಗಾರಿಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿರುವುದು ನಾವೆಲ್ಲರೂ ಅಬ್ಬಯ್ಯ ಅವರ ಕಾರ್ಯಕ್ಕೆ ಸಂತಸ ತಂದಿದೆ ಎಂದರು. ಅಬ್ಬಯ್ಯ ಅವರು ಕೇವಲ ತಮ್ಮ ಕ್ಷೇತ್ರವಷ್ಟೆ ಅಲ್ಲ ಜಿಲ್ಲೆಯಲ್ಲಿ ರಾಜ್ಯದಲ್ಲಿ ಸಮುದಾಯದ ಹಿತಕ್ಕೆ ಕೋಟ್ಯಾಂತರ ಅನುದಾನ ತಂದು ಹಿತ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಬ್ಬಯ್ಯ ಅವರು ತಮ್ಮ ಪೂರ್ವ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಆದರೇ ಅವರಿಗೆ ತೇಜೋವಧೆಗೆ ಮುಂದಾಗಿರುವ ರಾಜಕೀಯ ಚಟುವಟಿಕೆಯ ದುರಾರೋಪಗಳು ತಪ್ಪು ಎಂದು ಉಳ್ಳಿಕಾಶಿ ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ ಬೆಳದಡಿ, ನಾಗೇಶ ಕತ್ರಿಮಲ್, ಲೋಹಿತ್ ಗಾಮನಗಟ್ಟಿ, ಹೊನ್ನಪ್ಪ ದೇವಗಿರಿ, ಗಂಗಾಧರ ಟಗರಗುಂಟಿ ಸೇರಿದಂತೆ ಉಪಸ್ಥಿತರಿದ್ದರು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]