ಹುಬ್ಬಳ್ಳಿ : ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಇದೇ ದಿ. ೧೨ ರಂದು
‘ಕಾರ್ಮಿಕ ಭವನ ಚಲೋ’ ಪ್ರತಿಭಟನಾ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ದುರ್ಗಪ್ಪ ಚಿಕ್ಕತುಂಬಳ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಕಾರ್ಮಿಕ ಕಾರ್ಮಿಕ ಇಲಾಖೆಯ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಅನೇಕ ಸೌಲಭ್ಯಗಳನ್ನು ರೂಪಿಸಿದ್ದಿ,,ಯಾವುದೇ ಸೌಲಭ್ಯಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಚಿವರಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಇನ್ನೂ ಪ್ರತಿಭಟನೆಯಲ್ಲಿ ಹಿರಿಯ ಕಾರ್ಮಿಕರಿಗೆ ಪಿಂಚಣಿ ಯೋಜನೆಯಲ್ಲಿನ ದ್ವಂದ್ವ ನೀತಿಯನ್ನು ಕೈ ಬಿಟ್ಟು ಅನಿಯಮಿತ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕು. ಶೈಕ್ಷಣಿಕ ಧನಸಹಾಯದ ಎಸ್.ಎಸ್.ಪಿ ತಂತ್ರಾಂಶದಲ್ಲಿ ಅನೇಕ ತಾಂತ್ರಿಕ ದೋಷ ಉಂಟಾಗುತ್ತಿದ್ದು, ಅರ್ಜಿ ಸಲ್ಲಿಸಲು ಮತ್ತು ಆವಧಿ ದಿನಾಂಕವನ್ನು ಜೂನ್ ೩೦ ರ ವರೆಗೆ ವಿಸ್ತಾರಿಸಬೇಕು.
ಹುಬ್ಬಳ್ಳಿ ಕಾರ್ಮಿಕ ಭವನವು ಅವ್ಯವಸ್ಥೆಯ ಆಗರವಾಗಿದ್ದು, ಮೂಲಭೂತ ಸೌಕರ್ಯ ಒದಗಿಸಬೇಕು, ೨೦೧೭ ರಿಂದ ಬಾಕಿ ಇರುವ ವಿವಿಧ ಧನ ಸಹಾಯಗಳ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು, ಕಲ್ಯಾಣ ಮಂಡಳಿಯ ಬಸ್ ಪಾಸ್,ಗೃಹಭಾಗ್ಯ, ಅನಿಲಭಾಗ್ಯ, ಹಾಗೂ ಲಾಪಟಾಪ್ ಯೋಜನೆಗಳನ್ನು ರಾಜ್ಯಾದ್ಯಂತ ವಿಸ್ತಾರಣೆ ಮಾಡಬೇಕು, ಎಲ್ಲಾ ಕಾರ್ಮಿಕರಿಗೆ ಕಿಟ್ ನೀಡಬೇಕೆಂದು ಒತ್ತಾಯಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬಂಡಿವಡ್ಡರ, ಗೌರವಧ್ಯಾಕ್ಷ ರಫೀಕ್ ಬಡೇಮಿಯಾ, ಕಾರ್ಯದರ್ಶಿ ವಾಸು ಲಮಾಣಿ, ಮಾಬುಸಾಬ ಸುಂಕದ, ನಿಂಗಪ್ಪ ವಡ್ಡರ ಸೇರಿದಂತೆ ಉಪಸ್ಥಿತರಿದ್ದರು.